ಬೆಂಗಳೂರು: ಛಲವಾದಿ ಪಾಳ್ಯ ವಾರ್ಡ್‌ನ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಅಂಜನಪ್ಪ ವಾರ್ಡ್ ನಿವಾಸಿಯಾಗಿದ್ದ ರೇಖಾ ಕದಿರೇಶ್ ತನ್ನ ಕಚೇರಿ ಮುಂದೆಯೇ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪೀಠರ್, ಸೂರ್ಯ, ಸೂರಜ್, ಸ್ಟೀಫನ್, ಪುರೋಷತ್ತಮ್, ಅಜಯ್, ಅರುಣ್ ಕುಮಾರ್, ಸೆಲ್ವರಾಜ್ ಅಲಿಯಾಸ್ ಕ್ಯಾಫ್ಟನ್‌ಗೆ 72ನೇ ಸಿಸಿಹೆಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಇದೇ ಕೇಸ್‌ನ ಆರೋಪಿ ಮಾಲಾ ವಿಚಾರಣೆ ವೇಳೆ ಸಾವನ್ನಪ್ಪಿದ್ದರು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ 2021 ಜೂನ್‌ನಲ್ಲಿ ಪ್ರಕರಣ ದಾಖಲಾಗಿತ್ತು.
PublicNext
01/01/2025 12:06 pm