ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕಗಳಿಸಿ - ಶಾಸಕ ಡಾ.ಚಂದ್ರು ಲಮಾಣಿ

ಗದಗ : ಪಟ್ಟಣದ ಬಿಸಿಎನ್ ವಿಜನ್ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಸೋಮವಾರ ವಿಜನ್ 25 ಎಸ್.ಎಸ್.ಎಲ್.ಸಿ ಪರೀಕ್ಷಾ ಕುರಿತು ಶಿಕ್ಷಣ ಮತ್ತು ಸಾಕ್ಷ್ಯರತಾ ಇಲಾಖೆಯಿಂದ ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿಯವರು ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದಿನ ಎಲ್ಲಾ ಶಿಕ್ಷಣದ ಪಿಠಿಕೆಯಾಗಿದ್ದು ಇದರಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಸದಾ ಅಧ್ಯಯನದಲ್ಲಿ ಇರಬೇಕು ಇಂದಿನ ಶಿಕ್ಷಣದ ಗುಣಮಟ್ಟದ ಕಲಿಕಾ ಪದ್ದತಿ ಎಲ್ಲವೂ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಕರೊಂದಿಗೆ ಚರ್ಚಿಸಿ ಸಂವಾದಗಳನ್ನು ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಂಸ್ಥೆಯ ಮತ್ತು ಕಲಿಸಿದ ಶಿಕ್ಷಕರ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಕ್ಷೇತ್ರಶಿಕ್ಷಣಾ ಅಧಿಕಾರಿ ನಾನಕಿ ನಾಯಕ ಅವರು ಮಾತನಾಡಿ ಮುಂಬರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕು ಅಗ್ರಸ್ಥಾನ ಪಡೆಯುವಲ್ಲಿ ಈಗಾಗಲೇ ವಿಷಯ ಶಿಕ್ಷಕರು ಮುಖ್ಯೊಪಾದಯರುಗಳ ಸಭೆ ಕರೆದು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಹೆಚ್ಚು ಮನನವಾಗುವಂತೆ ತಿಳಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭೀತಿ ಕಳೆಯಲು ಪೂರಕವಾದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಮಂಜುನಾಥ ಬಂಡಿವಾಡ ವಹಿಸಿದರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಂದಾ ಹಂಪಿಹೊಳಿ ಕಾರ್ಯಕ್ರಮದ ಸಂಯೋಜನಕರಾದ ಯು.ಜಿ.ಹುಚ್ಚಯ್ಯನಮಠ ಬಿ.ಆರ್.ಪಿ ಈಶ್ವರ ಮೇಡ್ಲರಿ ವಿಷಯ ಪರಿಣಿತರಾದ ಸಿ.ಎಫ್.ಜೋಗಿನ ಶೇಖರ ಚಿಕ್ಕಣ್ಣವರ ಸಿದ್ದಲಿಂಗೇಶ ಹಲಸೂರ ಇದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಧರ್ಮದರ್ಶಿ ಲೋಹಿತ ನೆಲವಿಗಿ ಎಲ್.ಎಸ್.ಅರಳಹಳ್ಳಿ ಎಚ್.ಎಮ್.ಗುತ್ತಲ ಹಾಗೂ ತಾಲೂಕಿನ ಶಾಲೆಗಳ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದರು.

Edited By : PublicNext Desk
Kshetra Samachara

Kshetra Samachara

30/12/2024 03:39 pm

Cinque Terre

7.44 K

Cinque Terre

0