ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಣಂತಿ ಸಾವಿಗೆ ಆರೋಗ್ಯ ಇಲಾಖೆ ಸ್ಪಷ್ಟನೆ

ಬೆಳಗಾವಿ : ಬೆಳಗಾವಿಯ BIMS ಮೆಡಿಕಲ್ ಕಾಲೇಜಿನಲ್ಲಿ ಪೂಜಾ ಅಡಿವೆಪ್ಪ ಬಾಣಂತಿ ಸಾವಿಗೆ ಆರೋಗ್ಯ ಇಲಾಖೆ ಸ್ಪಷ್ಟನೆ ಕೊಟ್ಟಿದೆ. ಪೂಜಾ ಹೆರಿಗೆ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ. 25 ವರ್ಷದ ಪೂಜಾ ಅವರು Dilated cardiomyopathy with aspiration pneumonia with antepartum eclampsia ದಿಂದ ಬಳಲುತ್ತಿದ್ದರು.

24/12/2024 ರಂದು BIMS ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಟ್ ಆಗಿದ್ದ ಪೂಜಾ ಅಡ್ಮಿಟ್ ಆಗುವಾಗ ಗಂಭೀರ ಸ್ಥಿತಿಯಲ್ಲಿದ್ದರು. ದಾಖಲಾದ ಸಂದರ್ಭದಲ್ಲಿ ರೋಗಿಯ ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವವಾಗುತ್ತಿತ್ತು.‌ ಇದು ಪೂಜಾ ಅವರ ಐದನೆ ಬಾರಿಯ ಪ್ರಗ್ನೆನ್ಸಿಯಾಗಿತ್ತು. ಹೆರಿಗೆಯ ದಿನಾಂಕ ಇನ್ನೂ ಒಂದು ತಿಂಗಳು ಮುಂದಿದ್ದರಿಂದ, ಗರ್ಭಿಣಿ ಪೂಜಾ ಅವರು ಸ್ಥಿತಿ ಗಂಭೀರವಾಗಿದ್ದರಿಂದ ಮಗುವಿನ ಜೀವ ಉಳಿಸುವ ನಿಟ್ಟಿನಲ್ಲಿ ಕುಟುಂಬದವರ ಒಪ್ಪಿಗೆ ಪಡೆದು ಸಹಜ ಹೆರಿಗೆ ಮಾಡಿಸಲಾಗಿದೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ. ಆದ್ರೆ ಪೂಜಾ ನಿಧನರಾಗಿದ್ದು, ಮಗುವನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

Edited By : Nirmala Aralikatti
PublicNext

PublicNext

26/12/2024 08:33 pm

Cinque Terre

21.04 K

Cinque Terre

0