ದೆಹಲಿ: ಹೆಂಡತಿಯ ಅನಾರೋಗ್ಯ ಹಿನ್ನಲೆಯಲ್ಲಿ ಗಂಡ ಸ್ವಯಂ ನಿವೃತ್ತಿ ಪಡೆದ್ರೆ ಹೆಂಡತಿ ನಿವೃತ್ತಿ ಕಾರ್ಯಕ್ರಮದಲ್ಲೇ ಸಾವನ್ನಪ್ಪಿದ್ದಾರೆ!
ಹೆಂಡತಿಯ ಆರೋಗ್ಯ ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಹಿನ್ನಲೆಯಲ್ಲಿ ನಿವೃತ್ತಿ ಪಡೆದಿದ್ದು, ನಿವೃತ್ತಿಯ ಹಿನ್ನಲೆಯಲ್ಲಿ ಕಚೇರಿ ಸಿಬ್ಬಂದಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಇತ್ತು.
ದುರಂತ ಅಂದ್ರೆ ಬೀಳ್ಕೊಡುಗೆಯ ಸಮಾರಂಭಕ್ಕೆ ಆಗಮಿಸಿದ್ದ ಪತ್ನಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಕೋಟಾದಲ್ಲಿ ದೇವೇಂದ್ರ ಎಂಬವರು ಕೇಂದ್ರ ಉಗ್ರಾಣದಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವಧಿಗೂ ಮುನ್ನವೇ ಹೆಂಡತಿಗಾಗಿ ದೇವೇಂದ್ರ ವಿಆರ್ ಎಸ್ ಪಡೆದರು.
ಆದರೆ, ದೇವೇಂದ್ರ ಅವರ ಪತ್ನಿ ದೀಪಿಕಾ ಬೀಳ್ಕೊಡುಗೆ ಸಂದರ್ಭದಲ್ಲೇ ಸಾವನ್ನಪ್ಪಿದ್ದು ಜವರಾಯನ ಆಟದ ಮುಂದೆ ಮನುಷ್ಯನ ಲೆಕ್ಕಾಚಾರ ಶೂನ್ಯ ಅನ್ನೋದು ಸಾಬೀತಾಯ್ತು.
PublicNext
27/12/2024 12:28 pm