ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ ಏರ್ಪೋರ್ಟ್ ಗೆ ಕೂಡಲೇ ಕುವೆಂಪು ಹೆಸರಿಡಿ : ನಾಗರಿಕರ ರಕ್ಷಣಾ ಸಮಿತಿ ಆಗ್ರಹ

ಶಿವಮೊಗ್ಗ : ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣಕ್ಕೆ ನಾಮಫಲಕ ಅಳವಡಿಸಲು ಕೋರಿ ಇಂದು ಜಿಲ್ಲಾಡಳಿತದ ಮೂಲಕ ಏರ್ಪೋರ್ಟ್ ಅಥಾರಿಟಿಗೆ ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ವಿಮಾನ ನಿಲ್ದಾಣವನ್ನು 2023ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಉದ್ಘಾಟನೆ ಮಾಡಿದರು. ಅದಾದ ನಂತರ ಶಿವಮೊಗ್ಗದಿಂದ ದೇಶದ ವಿವಿಧಡೆ ವಿಮಾನ ಹಾರಾಟ ಸಹ ಆರಂಭವಾಗಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ನಿಮ್ಮ ಹೆಸರನ್ನು ಇಟ್ಟಿರುವುದು ಸಹ ಎಲ್ಲರಿಗೂ ತಿಳಿದಿದೆ. ಆದರೆ ಈ ಹೆಸರು ಕೇವಲ ವಿಮಾನದ ಟಿಕೆಟ್ ಬುಕ್ ಮಾಡುವಾಗ ಮತ್ತು ಟಿಕೆಟ್ ನಲ್ಲಿ ಮಾತ್ರ ತೋರಿಸುತ್ತಿದ್ದು ಭವ್ಯ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲಾಗಲಿ ಮತ್ತು ಬೇರೆಲ್ಲೂ ನಾಮಫಲಕಗಳನ್ನು ಅಳವಡಿಸಿಲ್ಲ ಎಂದು ದೂರಿದ್ದಾರೆ.

ಕೂಡಲೇ ವಿಮಾನ ನಿಲ್ದಾಣದ ಮುಖ್ಯದ್ವಾರ ಮತ್ತು ವಿಮಾನ ನಿಲ್ದಾಣಕ್ಕೆ ಬರುವ ರಸ್ತೆ ಸೇರಿದಂತೆ ವಿಮಾನ ನಿಲ್ದಾಣದ ಒಳಗೆ ನಾಮಫಲಕಗಳನ್ನು ಅಳವಡಿಸಲು ಮನವಿ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/12/2024 08:27 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ