ಬೆಂಗಳೂರು: ಮೊಟ್ಟೆ ಎಸೆತ ಪ್ರಕರಣ ಆಸ್ಪತ್ರೆಯಿಂದ ಶಾಸಕ ಮುನಿರತ್ನ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.. ತಲೆಗೆ ಪೆಟ್ಟಾದ ಹಿನ್ನೆಲೆಯಲ್ಲಿ ಅಬ್ಸರ್ವೇಷನ್ನಲ್ಲಿ ಇರುವಂತೆ ವೈದ್ಯರು ಮುನಿರತ್ನ ಅವರಿಗೆ ಸೂಚಿಸಿದ್ದರು. ಬುಧವಾರದ ರಾತ್ರಿಯನ್ನು ಆಸ್ಪತ್ರೆಯಲ್ಲಿ ಕಳೆದಿದ್ದ ಮುನಿರತ್ನ ಗುರುವಾರ ಬೆಳಗ್ಗೆ ಡಿಸ್ಚಾರ್ಜ್ ಆಗಿದ್ದಾರೆ.
ಘಟನೆ ಸಂಬಂಧ 12 ಗಂಟೆಗೆ ಮುನಿರತ್ನ ಮಹತ್ವದ ಪ್ರೆಸ್ ಮೀಟ್ ನಡೆಸಲಿದ್ದಾರೆ. ಘಟನೆ ಸಂಬಂಧ ಇಂಚಿಂಚು ಮಾಹಿತಿ ಕೊಡಲಿರೋ ಶಾಸಕರು, ಮೊಟ್ಟೆ ಎಸೆತ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ.
ಪ್ರಕರಣದಲ್ಲಿ ಪೊಲೀಸರು ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಅಂತ ಹೇಳಿಕೆ ಕೊಟ್ಟಿದ್ದು, ಎಲ್ಲವನ್ನ ಮಧ್ಯಾಹ್ನ ಮಾತಾನಾಡುತ್ತೇನೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಅಂತ ಶಾಸಕ ಮುನಿರತ್ನ ಹೇಳಿಕೆ ನೀಡಿದ್ದಾರೆ.
PublicNext
26/12/2024 08:59 am