ಮಡಿಕೇರಿ: ಹೊಸ ವರ್ಷಾಚರಣೆ ದಿನಗಣನೆ ಆರಂಭವಾಗಿದ್ದು 2024ನ್ನು ಬೀಳ್ಕೊಟ್ಟು 2025 ಹೊಸ ವರ್ಷವನ್ನ ಬರ ಮಾಡಿಕೊಳ್ಳಲು ಯುವ ಸಮೂಹ ಕಾತುರತೆಯಿಂದ ಕಾಯುತ್ತಿದೆ. ಜೊತೆಗೆ ಕೊಡಗು ಜಿಲ್ಲೆ ಪ್ರವಾಸಿ ತಾಣವಾಗಿರೋದ್ರಿಂದ ಹೆಚ್ಚಿನ ಪ್ರವಾಸಿಗರು ಕೊಡಗು ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ. ಅಕ್ರಮ ಚಟುವಟಿಕೆಗಳು ನಡೆಯದಂತೆ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಡಲಿದ್ದಾರೆ. ಹೊಂ ಸ್ಟೇ ರೆಸಾರ್ಟ್‌ಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಸೂಚಿಸಿದ್ದು ಅವರ ಮೇಲೂ ಪೊಲೀಸ್ ಇಲಾಖೆ ಕಣ್ಣಿಡಲಿದೆ.
ಹೊಸ ವರ್ಷಚಾರಣೆಯ ದಿನ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ವಿಶೇಷ ಪೊಲೀಸ್ ತಂಡ ಕೂಡ ಕಾರ್ಯಪ್ರವೃತ್ತರಾಗಲಿದ್ದು ರಾತ್ರಿಯೀಡಿ ಪ್ಯಾಟ್ರೋಲಿಂಗ್ ಕೂಡ ಮಾಡಲಾಗುವುದು. ಅಂದು ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತೆ ವಹಿಸಲಾಗುವುದು. ಡ್ರಗ್ ಫ್ರೀ ನ್ಯೂಯಿಯರ್‌ಗೆ ನಾವು ಸಜ್ಜಾಗಿದ್ದೇವೆ. ಒಂದು ವೇಳೆ ಅಂತಹ ಅಕ್ರಮಗಳು ಕಂಡು ಬಂದಲ್ಲಿ ಕೂಡಲೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಕೊಡಗು ಎಸ್‌ಪಿ ರಾಮರಾಜನ್ ತಿಳಿಸಿದ್ದಾರೆ.
PublicNext
22/12/2024 05:10 pm