ಸಿದ್ದಾಪುರ: ಸಿ ಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದ ಬಳಸಿರುವುದು ಸ್ತ್ರೀ ಕುಲಕ್ಕೆ ಮಾಡಿರುವ ಅಪಮಾನವಾಗಿದೆ. ಕೂಡಲೇ ಅವರನ್ನ ಪರಿಷತ್ ಸದಸ್ಯತ್ವದಿಂದ ಅಮಾನತ್ತುಗೊಳಿಸಬೇಕು ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮತ್ತು ಸ್ತ್ರೀ ಕುಲದ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸಿದ್ದಾಪುರ ತಾಲೂಕ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೀಮಾ ಹೆಗಡೆ ಆಗ್ರಹ ಮಾಡಿದ್ದಾರೆ.
ದೇಶ ಮತ್ತು ಭೂಮಿಯನ್ನು ತಾಯಿ ಅಂದರೆ ಹೆಣ್ಣು ಎಂದು ಪೂಜೆ ಮಾಡುವ ಸಂಸ್ಕಾರ ಹೊಂದಿದ ದೇಶ ನಮ್ಮದು ಇಂತಹ ಸಂಸ್ಕೃತಿ ಉಳ್ಳ ದೇಶದಲ್ಲಿ ಜನಪ್ರತಿನಿಧಿಗಳಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ಹೆಣ್ಣಿಗೆ ಅಪಮಾನ ಮಾಡಿ ಅಗೌರವ ತೋರಿಸಿರುವುದು ಖಂಡನೀಯ,ಹೆಣ್ಣಿನ ಮೇಲೆ ಬಿಜೆಪಿ ಅವರಿಗೆ ನಿಜವಾದ ಗೌರವ ಇದ್ದರೆ ಅವರನ್ನ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಇವರ ನಾಯಕರು ಪ್ರಧಾನ ಮಂತ್ರಿಗಳು ಈ ಮಾತನ್ನು ಕೇಳಿ ಸುಮ್ಮನೆ ಕೂತಿದ್ದಾರೆ ಅಂದರೆ
PublicNext
22/12/2024 03:17 pm