ಬೆಳಗಾವಿ: ಎಂಎಲ್ಸಿ ಸಿಟಿ ರವಿಯನ್ನು ಬೆಳಗಾವಿ ಪೊಲೀಸರು ಫೇಕ್ ಎನಕೌಂಟರ್ ಮಾಡ್ತಿದ್ರು ಅನಿಸುತ್ತೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಸಚಿವ ಎಚ್.ಕೆ.ಪಾಟೀಲ್, ಸುವರ್ಣ ಸೌಧದಲ್ಲಿ ಸಚಿವೆ ಹೆಬ್ಬಾಳ್ಕರ್ ಬೆಂಬಲಿಗರು ನಡೆಸಿದ ಗೂಂಡಾಗಿರಿಗೆ ಪ್ರತಿಕ್ರಿಯೆ ನೀಡದೆ ಜಾರಿಕೊಂಡರು.
ಬೆಳಗಾವಿಯ ಖಾಸಗಿ ಹೋಟೆಲನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಫೇಕ್ ಎನ್ಕೌಂಟರನಂತಹ ಶಬ್ದ ಬಳಕೆಯ ಮಾತುಗಳು ಸೃಷ್ಟಿ ಮಾಡೋದು ಪ್ರಹ್ಲಾದ ಜೋಶಿಗೆ ಶೋಭೆ ತರಲ್ಲ ಎಂದರು.
ಅಧಿವೇಶನದ ಕೊನೆ ದಿನ ಪರಿಷತ್ತಿನಲ್ಲಿ ಆಗಿರುವ ಘಟನೆ ನಾವೆಲ್ಲರೂ ತಲೆಕೆಳಗೆ ಮಾಡುವ ದುರ್ದೈವದ ಘಟನೆ. ನಂತರದಲ್ಲಿ ಪೊಲೀಸರು ಸಿಟಿ ರವಿಯನ್ನ ಅರೆಸ್ಟ್ ಮಾಡಿದ್ರು. ಅದರ ಬಗ್ಗೆ ಈಗ ಏನೇನೋ ಆರೋಪ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಏನೂ ಪ್ರತಿಕ್ರಿಯೆ ಮಾಡೊದಿಲ್ಲ. ಈಗಾಗಲೇ ಪೊಲೀಸರ ತಮ್ಮ ವಿವರಣೆ ಕೊಟ್ಟಿದ್ದಾರೆ. ಒಂದು ಸ್ಥಳಕ್ಕೆ ಯಾಕೆ ಕರೆದುಕೊಂಡು ಹೋಗಿದ್ರು ಅನೋದಕ್ಕೆ ಪೊಲೀಸರು ವಿವರಣೆ ಕೊಟ್ಟಿದ್ದಾರೆ ಎಂದರು.
ಸಿಟಿ ರವಿ ಹಲ್ಲೆಗೆ ಯತ್ನಿಸಿದ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರ ವಿರುದ್ಧ ಈವರೆಗೂ ಕೇಸ್ ದಾಖಲಿಸಿಕೊಳ್ಳದ ಪೊಲೀಸರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಬಗ್ಗೆ ಗೃಹ ಸಚಿವರು ಪ್ರತಿಕ್ರಿಯೆ ನೀಡ್ತಾರೆ ಎಂದರು
ಪಂಚಮಸಾಲಿ ಸಮಾಜದವರ ಮೇಲೆ ಲಾಠಿಚಾರ್ಜ್ ಮಾಡಿದ ಪೊಲೀಸ ಅಧಿಕಾರಿಗೆ ಬಹುಮಾನ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಇವೆಲ್ಲ ಕೆಟ್ಟವಿಚಾರಗಳನ್ನು ಮುಂದಿಟ್ಟುಕೊಂಡು ಹೇಳುವ ಹೇಳಿಕೆಗಳು ಈ ಹೇಳಿಕೆಗಳನ್ನ ಸಮುದಾಯಕ್ಕೆ ಹಚ್ಚುವುದು ಸೂಕ್ತವಲ್ಲ ಎಂದು ಎಚ್.ಕೆ.ಪಾಟೀಲ್ ಹೇಳಿದರು.
PublicNext
22/12/2024 12:52 pm