ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿಯಾಗಿರುವ ಘಟನೆ ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ನಡೆದಿದೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು ಮುಳ್ಳಯ್ಯನಗಿರಿ ಪ್ರವಾಸಕ್ಕೆ ಸರ್ಕಾರಿ ಬಸ್‌ನಲ್ಲಿ ಬಂದಿದ್ದರು.
ಗಿರಿ ಪ್ರದೇಶದಲ್ಲಿ ಲಾಂಗ್ ಚಾರ್ಸಿ ವಾಹನಗಳ ಸಂಚಾರ ನಿಷೇಧವಿರುವುದರಿಂದ ಸ್ಥಳೀಯ ಟ್ರಾಕ್ಸ್‌ವೊಂದರಲ್ಲಿ ತೆರಳುವಾಗ ಕೈಮರ ಚೆಕ್ ಪೋಸ್ಟ್ ಬಳಿ ಟೈರ್ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ 5 ಜನ ಮಕ್ಕಳಿಗೆ ಗಾಯಗಳಾಗಿವೆ. ಈ ಘಟನೆ ಮುಳ್ಳಯ್ಯನಗಿರಿಯ ಎತ್ತರದ ಪ್ರದೇಶದಲ್ಲಿ ನಡೆದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು.
PublicNext
21/12/2024 04:33 pm