ಹಾಸನ: ಛಾಯಾಗ್ರಾಹಕ ವೃತ್ತಿ ಅತ್ಯಂತ ಶ್ರೇಷ್ಠ, ಪುರಾತನ ಕಾಲದ ನೆನಪುಗಳನ್ನು ಇಂದಿಗೂ ಪ್ರಸ್ತುತ ಪಡಿಸುವಲ್ಲಿ ಛಾಯಾಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಗರಸಭೆ ಅಧ್ಯಕ್ಷ ಚಂದ್ರೇಗೌಡ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ದಶಕಗಳ ನೆನಪುಗಳನ್ನು ಒಂದು ಚಿತ್ರದ ಮೂಲಕ ನೆನಪಿಸುವ ಕಲೆ ಛಾಯಾಗ್ರಹಣ ದಿಂದ ಮಾತ್ರ ಸಾಧ್ಯ ಎಂದು ಶ್ಲಾಘಿಸಿದರು.
ಇತ್ತಿಚಿನ ದಿನಗಳಲ್ಲಿ ಛಾಯಾಗ್ರಾಹಣ ಶುಭ ಸಮಾರಂಭಗಳಳು ಹಾಗೂ ಅಶುಭ ಸಮಯದ ವೇಳೆಯೂ ಅವರ ಪಾತ್ರ ಅಪಾರ. ವಿವಾಹ ಅಥವಾ ಇನ್ನಿತರ ಶುಭ ಕಾರ್ಯಗಳ ವೇಳೆ ಫೋಟೋಗ್ರಾಫರ್ ಬರುವುದು ತಡವಾದರೆ ಅವರ ಚಡಪಡಿಕೆ ಒಬ್ಬ ಛಾಯಾಗ್ರಾಹಕ ನ ಪ್ರಾಮುಖ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ, ತಮ್ಮ ವೃತ್ತಿ ಬದುಕಿನಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡುವ ಜೊತೆಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಕರೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕರು ನಿರಂತರವಾಗಿ ಸಾವನ್ನಪ್ಪಿದ್ದಾರೆ ಅದ್ರಲ್ಲೂ ಕೋವಿ ಡ್ ನಂತರ ಸಾವಿನ ಸಂಖ್ಯೆ ಏರಿಕೆ ಆಗಿದೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹಾಗೂ ವೃತ್ತಿ ಬದುಕಿನ ಒತ್ತಡ ಇದಕ್ಕೆಲ್ಲಾ ಕಾರಣ, ರಾಜರಿಣಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಅವರನ್ನು ಮುಂಚೂಣಿಯಲ್ಲಿ ಬಳಸಿಕೊಂಡು ಅವರ ಯೋಗಕ್ಷೇಮದ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಎಸ್ಟು ಸರಿ ಎಂದು ಪ್ರಶ್ನಿಸಿದರು.
Kshetra Samachara
21/12/2024 01:28 pm