ಕಾರ್ಕಳ: ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಡಿ.27ರಿಂದ 29ರವರೆಗೆ "ಕಾರ್ಲೋತ್ಸವ- 2024" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಕಳ ಟೈಗರ್ಸ್ ಪ್ರಶಾಂತ ಕಾಮತ್ ಅಭಿಮಾನಿ ಬಳಗದ ಸದಸ್ಯ ಪ್ರಕಾಶ್ ರಾವ್ ಹೇಳಿದ್ದಾರೆ.
ಕಾರ್ಕಳದ ಸಾಲ್ಮರದಲ್ಲಿಯ ಗುರುದೀಪ್ ಗಾರ್ಡನ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಹಾಗೂ ಬಾಯ್ ಜೋನ್ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಡಿ. 27ರಂದು ಸಾಯಂಕಾಲ 3ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಂಡು ಡಿ. 29ರಂದು ಸಮಾರೋಪ ನಡೆಯಲಿದೆ. ಸಂಸದರು, ಶಾಸಕರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿ. 25ರಿಂದಲೇ ಅಮ್ಯೂಸ್‌ಮೆಂಟ್ ಪಾರ್ಕ್ ತೆರೆದುಕೊಳ್ಳಲಿದೆ. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಹುಲಿವೇಷ, ವಾಯಲಿನ್, ಚೆಂಡೆ, ಯಕ್ಷಗಾನ ನಡೆಯಲಿದೆ. ವಿಶೇಷ ಆಚರಣೆಯಾಗಿ ಯುವ ಜನರ ಕಣ್ಮಣಿ ಬಾಲಿವುಡ್ ಕೊರಿಯೋಗ್ರಾಫರ್, ನೃತ್ಯಪಟು, ನಟ ಧರ್ಮೇಶ್ ಎಲಾಂಡೆ ನೃತ್ಯ ಪ್ರದರ್ಶನ ಹಾಗೂ ಚಲನಚಿತ್ರ ನಟರ ಕೂಡುವಿಕೆಯಲ್ಲಿ ಸ್ಟಾರ್ ನೈಟ್ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಆಚಾರ್ಯ, ಗಂಗಾಧರ ರಾವ್ ಉಪಸ್ಥಿತರಿದ್ದರು.
Kshetra Samachara
19/12/2024 03:23 pm