ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ತಲೆ ಆಫ್‌ ಆದರೆ ನೋಡು… ನಾನು ಮೊದಲೇ ಸರಿಯಿಲ್ಲ, ಗಂಡು ಮಕ್ಕಳು ಆಗಿದ್ರೆ ಬೇರೆನೇ ಕಥೆ - ಹನುಮಂತು ಗರಂ

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳು ಅಂತ ಬಂದಾಗ ಎಲ್ಲರೂ ತಾ ಮುಂದು ನಾ ಮುಂದು ಎಂದು ಬರುತ್ತಾರೆ. ಈ ಆಟದ ಮಧ್ಯೆ ಚೈತ್ರಾ ಮತ್ತು ರಜತ್ ನಡುವೆ ಮಾತಿನ ಚಕಮಿಕಿ ನಡೆದಿದೆ. ನೀನು ನಿನ್ನ ಟೀಮ್ ಗೆ ಫೇವರ್ ಮಾಡಿದ್ದೀಯಾ. ನನಗೆ ಮೋಕ್ಷಿತಾ ಗೊತ್ತು. ನಾವು ಎಲ್ಲ ನೋಡಿದ್ದೇವೆ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ಚೈತ್ರಾ ಅವರು ಇಲ್ಲ ನಾನು ಆ ರೀತಿ ಮಾಡಿಲ್ಲ. ಎಲ್ಲರೂ ಉಸ್ತುವಾರಿ ಮಾಡುವಾಗ ಮಾತನಾಡಲ್ಲ. ನಾನು ಉಸ್ತುವಾರಿ ಮಾಡುವಾಗ ಎಲ್ಲರೂ ಮಾತನಾಡುತ್ತಾರೆ ಎಂದು ಚೈತ್ರಾ ಅವರು ಹೇಳಿದ್ದಾರೆ.

ಟಾಸ್ಕ್ ಉಸ್ತುವಾರಿ ಜಗಳದಿಂದಾಗಿ ಇಡೀ ಟಾಸ್ಕ್ ರದ್ದಾಗಿದೆ. ದಿಂಬಿನ ಟಾಸ್ಕ್ ನಲ್ಲಿ ಮೊದಲು ಎರಡು ತಂಡದವರು ಸಮಬಲವಾಗಿ ಆಟವನ್ನು ಆಡುತ್ತಾರೆ. ಆ ಬಳಿಕ ಆಟದ ವಿಚಾರದಲ್ಲಿ ಕಿರಿಕಿರಿ ನಡೆದಿದೆ.

ಎರಡು ತಂಡಗಳು ಚಿತ್ರವಿರುವ ದಿಂಬನ್ನು ಹಿಡಿದುಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಚೌಕ್ಕಟ್ಟಿಗೆ ಬರಬೇಕು ಎನ್ನುವ ನಿಯಮವನ್ನು ಕೊಡಲಾಗಿದೆ. ಟಾಸ್ಕ್‌ ಉಸ್ತುವಾರಿಯನ್ನು ವಹಿಸಿಕೊಂಡಿರುವ ಚೈತ್ರಾ ಅವರು ದಿಂಬನ್ನು ಒಳಗಡೆಯಿಂದ ಇಸಿದುಕೊಂಡ್ರಿ ಎಂದಿದ್ದಾರೆ. ಅಣ್ಣಾ ನಿಮಗೆ ಇದು ಸರಿ ಕಾಣಿಸುತ್ತಾ ಎಂದು ಹನುಮಂತು ಬಳಿ ಹೇಳಿದ್ದಾರೆ. ಹನುಮಂತು ಅವರು ನಾನು ಗೆರೆ ದಾಟಿಲ್ಲ ಇಲ್ಲೇ ನಿಂತುಕೊಂಡಿದ್ದೇನೆ. ನನ್ನ ತಲೆ ಆಫ್‌ ಆದರೆ ನಾನು ಮೊದಲೇ ಸರಿಯಿಲ್ಲ. ಯಾರಾದ್ರೂ ಗಂಡು ಮಕ್ಕಳು ಆಗಿದ್ರೆ ಇತ್ತಾ ಎಂದು ಹನುಮಂತು ಗರಂ ಆಗಿದ್ದಾರೆ. ನಾಚಿಕೆ ಆಗಲ್ವಾ ನಿಮಗೆ ಎಂದು ಧನರಾಜ್‌ ಏರು ಧ್ವನಿಯಲ್ಲಿ ಚೈತ್ರಾಗೆ ಪ್ರಶ್ನೆ ಮಾಡಿದ್ದಾರೆ. ಯಾರಿಗೆ ಹೇಳ್ತಾ ಇದ್ದೀಯಾ ನಾಚಿಕೆ ಆಗಲ್ಲ ಅಂಥ. ಇದೆಲ್ಲ ನನ್ನ ಹತ್ರ ಇಟ್ಕೋಬೇಡ. ಬಾಯಿ‌ ಮುಚ್ಚಿಕೊಂಡು ಇದ್ರೆ ಆಯಿತು ಎಂದು ಆಕ್ರೋಶದ ನುಡಿಯಲ್ಲಿ ಚೈತ್ರಾ ಹೇಳಿದ್ದಾರೆ.

Edited By : Shivu K
PublicNext

PublicNext

19/12/2024 01:40 pm

Cinque Terre

13.02 K

Cinque Terre

0