ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಗಾಂಜಾ ಘಮಲು ಹರಡುತ್ತಿದೆ. ಕೆಲ ಖದೀಮರು ಕದ್ದು ಮುಚ್ಚಿ ಗಾಂಜಾ ಬೆಳೆಯುತ್ತಿದ್ದು, ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ದಂಧೆ ನಡೆಯುತ್ತಿದೆ. ಸದ್ಯ ಪೊಲೀಸರು ಭರ್ಜರಿ ಭೇಟೆಯಾಡುವ ಮೂಲಕ ಗಾಂಜಾ ಜಾಲಕ್ಕೆ ಹೆಡೆಮುರಿ ಕಟ್ಟಿದ್ದಾರೆ.
ಹೌದು..ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಕೆಡಿ ಗ್ರಾಮದಲ್ಲಿ ಗಾಂಜಾ ಜಪ್ತಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಂದಗಿ ತಾಲೂಕಿನ ಯರಗಲ್ ಕೆ ಡಿ ಗ್ರಾಮದ ಸಿದ್ದರಾಮ್ ಕಲಬುರ್ಗಿ ಅವರ ಸ್ವಂತ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ PSI ಆರಿಫ್ ಮುಶಾಪುರಿ ನೇತೃತ್ವದ ತಂಡ ದಾಳಿ ಮಾಡಿ 16 ಕೆಜಿ ಗಾಂಜಾವನ್ನ ಗಾಂಜಾ ಜಪ್ತಿ ಮಾಡಿದ್ದಾರೆ.
ಇನ್ನು ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದ್ದು ಆರೋಪಿ ಸಿದ್ದರಾಮ್ ಕಲ್ಬುರ್ಗಿಯನ್ನ ಪೊಲೀಸರು ಬಂಧಿಸಿದ್ದಾರೆ..
ಒಟ್ಟಿನಲ್ಲಿ ಹೊಸ ವರ್ಷ ಎಂಟ್ರಿ ಆಗ್ತಿದ್ದಂತೆ ಗಾಂಜಾ ಘಮಲು ಹರಡೋಕೆ ಶುರು ಆಗಿಬಿಡುತ್ತೆ. ಹೀಗಾಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
18/12/2024 08:56 am