ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ :(Exclusive ) ಶಾಲೆ ಹಿಂಭಾಗವೇ ನಕಲಿ ಮದ್ಯ ತಯಾರು ಘಟಕ - ಲಕ್ಷಾಂತರ ಮೌಲ್ಯದ ಮದ್ಯ ಸೀಜ್ ಮಾಡಿದ ಅಬಕಾರಿ ಡಿಸಿ ವೀರಣ್ಣ

ವಿಜಯಪುರ : ವಿಜಯಪುರ ಅಬಕಾರಿ ಇಲಾಖೆ ಭರ್ಜರಿ‌ ಕಾರ್ಯಾಚರಣೆ ನಡೆಸಿ ನಕಲಿ ಮದ್ಯ ತಯಾರಿಕೆ ಘಟಕದ ಮೇಲೆ‌ ದಾಳಿ ನಡೆಸಿ‌ ಲಕ್ಷಾಂತರ ಮೌಲ್ಯದ ಮದ್ಯವನ್ನ ಸೀಜ್ ಮಾಡಿದ್ದಾರೆ.

ಜಿಲ್ಲೆದ್ಯಾಂತ ಇತ್ತಿಚ್ಚೆಗೆ ನಕಲಿ ಮದ್ಯ ಸರಬರಾಜಾಗ್ತಿರೋ ಬಗ್ಗೆ ಸಾಕಷ್ಟು ದೂರು ಆಲಿಸಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ನಕಲಿ ಮದ್ಯ ತಯಾರಿ ಘಟಕವನ್ನ ಪತ್ತೆ ಮಾಡಿದ್ರು. ‌ಇಂದು ಮುಂಜಾನೆ ವಿಜಯಪುರ ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ದಾಳಿ ನಡೆಸಿ ನಕಲಿ ಮದ್ಯ ತಯಾರು ಘಟಕವನ್ನ ಸೀಜ್ ಮಾಡಿದ್ದಾರೆ.

ಸಿಂದಗಿ ಬಳಿಯ ಮೊರಟಗಿ ರಸ್ತೆಯಲ್ಲಿರುವ ಲೋಯೋಲ ಆಂಗ್ಲ ಶಾಲೆ ಹಿಂದೆಯೇ ಈ ಅಕ್ರಮ ಕೂಟ ನಡೆದಿದೆ. ಲೋಯೋಲ ಶಾಲೆ ಹಿಂದಿರುವ ಅಮೋಘಸಿದ್ಧ ಬಸಪ್ಪ ಹೂಗಾರ ಜಮೀನಿನಲ್ಲಿ ಶೆಡ್‌ ನಿರ್ಮಿಸಿದ್ದ ಆರೋಪಿಗಳು ನಕಲಿ ಮದ್ಯ ತಯಾರು ಮಾಡ್ತಿದ್ರು.

ನಕಲಿ ಸ್ಟಿಕ್ಕರ್, ಬಾಟಲ್ ಹಾಗೂ ಕಲಬೆರೆಕೆ ಮದ್ಯವನ್ನ ಬ್ರಾಂಡೆಡ್ ಮದ್ಯವಾದ ಇಂಪಿರಿಯಲ್ ಬ್ಲೂ, ಮ್ಯಾಕ್ ಡೊನಾಲ್ಡ್ ಸೇರಿದಂತೆ ಕೆಲ ಬ್ರಾಂಡ್ ಹೆಸರಲ್ಲಿ ನಕಲಿ ಮಾಡಲಾಗ್ತಿತ್ತು. ಇನ್ನೂ ಮಹರಾಷ್ಟ್ರ ಗಡಿ ಭಾಗದಲ್ಲಿ ಈ ನಕಲಿ ಮದ್ಯ ತಯಾರಿ ಘಟಕ ತಲೆ ಎತ್ತಿದ್ದು, ಹೈವೇ ಡಾಬಾಗಳು ಹಾಗೂ ಹಳ್ಳಿಗಳ ಅಂಗಡಿಗಳೇ ಇವರ ಮೇನ್ ಬ್ಯುಸಿನೆಸ್ ಪಾಯಿಂಟ್ ಆಗಿತ್ತಂತೆ.

ಇನ್ನೂ ಇತ್ತಿಚ್ಚಿಗಷ್ಟೇ ವಿಜಯಪುರಕ್ಕೆ ಅಬಕಾರಿ ಡಿಸಿಯಾಗಿದ್ದ ವೀರಣ್ಣ ಬಾಗೇವಾಡಿ ಈ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ, ದಾಳಿ ಮಾಡಿದ್ದಾರೆ. ಸದ್ಯ ಶೆಡ್‌ನಲ್ಲಿ 5,61,600 ನಕಲಿ ಮದ್ಯ ಬಾಟಲಿಗಳು ಹಾಗೂ 140 ಲೀಟರ್ ಮದ್ಯ ಹಾಗೂ ನಕಲಿ ಮದ್ಯ ತಯಾರಿಸಲು ಬೇಕಾದ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 10 ಲಕ್ಷ ಎಂದು ಅಂದಾಜಿಸಲಾಗಿದೆ.‌

ಇನ್ನೂ ನಕಲಿ ಮದ್ಯ ತಯಾರಿಸುತ್ತಿದ್ದ ಶೆಡ್ ಮಾಲೀಕ ಅಮೋಘದತ್ತ ಸೇರಿದಂತೆ ಕೃಷ್ಣ, ಬಾಡಗೆ, ವಿನಾಯಕ್, ಅಭಿಷೇಕ್‌ ಸೇವರನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಈ ಆರೋಪಿಗಳು ಸಾಕಷ್ಟು ವರ್ಷಗಳಿಂದ ಈ ಕೃತ್ಯ ನಡೆಸುತ್ತಿದ್ದು, ಇದು ವರೆಗೂ ಈ ನಕಲಿ ಮದ್ಯವನ್ನ ಎಲ್ಲೆಲ್ಲಿ ಮಾರಾಟ ಮಾಡಿದ್ರು.‌ ಈ ಆರೋಪಿಗಳ ಹಿಂದೆ ಯಾರ್ಯಾರಿದ್ದಾರೆ ಎಂದು ತನಿಖೆ ನಂತರವಷ್ಟೇ ಗೊತ್ತಾಗಬೇಕಿದೆ.

Edited By : Shivu K
PublicNext

PublicNext

14/12/2024 09:26 pm

Cinque Terre

33.05 K

Cinque Terre

0