ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಗಮನ ಸೆಳೆದ ದ್ಯಾಮವ್ವನ ಸೋಗು

ವಿಜಯಪುರ: ಇಂದಿನ ಅಧುನಿಕ ಭರಾಟೆಯಲ್ಲಿ ಸಾಕಷ್ಟು ಆಚರಣೆಗಳು ಮರೆಯಾಗುತ್ತಿವೆ. ಇದರ ಮಧ್ಯೆ ದ್ಯಾಮವ್ವನ ಸೋಗು ಎಂಭ ಗ್ರಾಮೀಣ ಸೊಗಡಿನ ಆಚರಣೆಯೊಂದು ಗಮನ ಸೆಳೆಯುತ್ತಿದೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಗೌರಿ ಶಂಕರ ಜಾತ್ರಾ ಮಹೋತ್ಸವ ಅಂಗವಾಗಿ ದ್ಯಾಮವ್ವನ ಸೋಗು ಎಂಬ ಸಂಪ್ರದಾಯ ಆಚರಣೆಯಲ್ಲಿದೆ.

ಪ್ರತಿ ವರ್ಷ ಗ್ರಾಮದ ಪ್ರಮುಖರೆಲ್ಲ ಒಟ್ಟಾಗಿ ಒಬ್ಬ ಯುವಕನಿಗೆ ಗ್ರಾಮ ದೇವತೆ ದ್ಯಾಮವ್ವನ ವೇಷ ಹಾಕಿ ಪಕ್ಕದಲ್ಲಿ ಇಬ್ಬರಿಗೆ ಸೇವಕಿಯರ ವೇಷ ಹಾಕಿ ಎತ್ತಿನ ಬಂಡಿಯಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡುವುದು ಸಂಪ್ರದಾಯ. ಇದರಿಂದ ಮಳೆ-ಬೆಳೆ ಉತ್ತಮವಾಗುತ್ತದೆ ಎನ್ನುವದು ಇಲ್ಲಿನ ಜನರ ನಂಬಿಕೆ.

ಸಂಪ್ರದಾಯ ಪ್ರಕಾರ ಈ ವರ್ಷವು ಪಟ್ಟಣದ ಹನುಮಾನ್ ದೇವಸ್ಥಾನದಿಂದ ಆರಂಭವಾದ ದ್ಯಾಮವ್ವನ ಸೋಗಿನ ಮೆರವಣಿಗೆ ಗೌರಿ ಶಂಕರ ದೇವಸ್ಥಾನದವರೆಗೆ ಸಾಗಿತು. ಮೆರವಣಿಗೆಯಲ್ಲಿ ಹಲಗೆ ನಾದ, ಡೊಳ್ಳು ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಮಂಜು ಕಲಾಲ, ಪಬ್ಲಿಕ ನೆಕ್ಸ್ಟ್‌ ವಿಜಯಪುರ

Edited By : Manjunath H D
PublicNext

PublicNext

16/12/2024 05:38 pm

Cinque Terre

22.01 K

Cinque Terre

0