ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಕಲ್ಲಿಗೆ ತಲೆ ಜಜ್ಜಿಕೊಳ್ಳುವ ಭಕ್ತರು…! ಇದೆಂಥಾ ವಿಚಿತ್ರ ಆಚರಣೆ...

ವಿಜಯಪುರ: ಜಗತ್ತಿನಲ್ಲಿರುವ ಚಿತ್ರ-ವಿಚಿತ್ರ ಆಚರಣೆಗಳು ಮಾಧ್ಯಮದ ಮೂಲಕ ಬೆಳಕಿಗೆ ಬರುತ್ತಿರುತ್ತವೆ. ಆದರಂತೆಯೇ ವಿಜಯಪುರ ಜಿಲ್ಲೆಯಲ್ಲಿ ಕಲ್ಲಿಗೆ ತಲೆ ಜಜ್ಜಿಕೊಳ್ಳುವ ಮೂಲಕ ಹರಕೆ ತೀರಿಸುವ ವಿಚಿತ್ರ ಸಂಪ್ರದಾಯವೊಂದು ಬೆಳಕಿಗೆ ಬಂದಿದೆ.

ಹೌದು ! ವಿಜಯಪುರ ಜಿಲ್ಲೆಯ ನಿಡಂಗುಂದಿ ತಾಲೂಕಿನ ಗಣಿ ಗ್ರಾಮ ವಿಚಿತ್ರ ಆಚರಣೆಗೆ ಸಾಕ್ಷಿಯಾಗಿದೆ. ಸೋಮನಾಥ ದೇವರ ಜಾತ್ರೆಯ ಹಿನ್ನೆಲೆ ಭಕ್ತರು ಕಲ್ಲಿಗೆ ತಲೆ ಗುದ್ದಿಕೊಂಡು ಆಶೀರ್ವಾದ ಪಡೆದಿದ್ದಾರೆ‌. ಪ್ರತಿವರ್ಷದಂತೆ ಈ ವರ್ಷವೂ ಸೋಮನಾಥ ಜಾತ್ರೆಯಲ್ಲಿ ಈ ವಿಚಿತ್ರ ಆಚರಣೆ ನಡೆದಿದೆ. ನೂರಾರು ವರ್ಷಗಳಿಂದ ನಡೆಯುತ್ತಿರೋ ಈ ಜಾತ್ರೆಯಲ್ಲಿ ಭಕ್ತರು ದೇಗುಲದ ಮುಂದಿನ ಇರುಮುಂಡಿ ಕಲ್ಲಿಗೆ ತಲೆ ಜಜ್ಜಿಕೊಳ್ಳೋದು ಆಚರಣೆಯ ಭಾಗವಾಗಿದೆ. ಹೀಗೆ ಮಾಡೋದ್ರಿಂದ ದೇವರ ಆಶೀರ್ವಾದ ಸಿಗುತ್ತೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ

Edited By : Somashekar
PublicNext

PublicNext

09/12/2024 04:15 pm

Cinque Terre

21.59 K

Cinque Terre

0