ಚಿತ್ರದುರ್ಗ: ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕಾ ಅದಾಲತ್ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ನೇತೃತ್ವದಲ್ಲಿ ರಾಷ್ಟ್ರೀಯ ಲೋಕಾ ಅದಾಲತ್ ನಡೆಸಲಾಯಿತು.
ಈ ವೇಳೆ ಕೌಟುಂಬಿಕ ಜಗಳ ಹಿನ್ನೆಲೆ ವಿಚ್ಚೇದನಕ್ಕೆ ಕೋರ್ಟ್ ಮೆಟ್ಟಿಲು ಹತ್ತಿದ್ದ ಮೂರು ಜೋಡಿ ಮತ್ತೆ ಒಂದಾಗಿದ್ದಾರೆ...ಈ ಜೋಡಿಗಳು ಜಿಲ್ಲಾ ನ್ಯಾಯಾಧೀಶರಾದ ರೋಣಾ ವಾಸುದೇವ್ ಸಮ್ಮುಖದಲ್ಲಿ ಪರಸ್ಪರ ಹೂ ಮಾಲೆ ಬದಲಿಸಿಕೊಂಡು ಮತ್ತೆ ಒಂದಾಗಿದ್ದಾರೆ. ಸೊಂಡೆಕೊಳ ಗ್ರಾಮದ ಕರುಣಾಸಾಗರ್ ಹಾಗೂ ಲತ, ಹಿರಿಯೂರು ನಗರದ ಮಹಾಲಿಂಗರಾಜು ಹಾಗೂ ಪ್ರತಿಭ& ಚಿಕ್ಕಂದವಾಡಿ ಗ್ರಾಮದ ಸ್ವಾಮಿ- ಪ್ರತಿಭ ಈ ಮೂರು ಜೋಡಿ ಮುನಿಸು ಮರೆತು ಒಂದಾಗಿದ್ದಾರೆ.
PublicNext
14/12/2024 07:24 pm