ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: 'ನುಡಿದಂತೆ ನಡೀತೆವೆ ಅಂತಾ ಹೇಳೋಕೆ ಸಚಿವರಿಗೆ ಯೋಗ್ಯತೆ ಇಲ್ಲ' - ಮಾಜಿ ಸಚಿವ ಎ. ನಾರಾಯಣಸ್ವಾಮಿ

ಚಿತ್ರದುರ್ಗ:ಸಿದ್ಧರಾಮಯ್ಯ ಸರಕಾರ ಬಂದ್ರೆ ಒಳಮೀಸಲಾತಿ ಜಾರಿ ಮಾಡ್ತೀವಿ ಅಂತಾ ಮಂಕು ಬೂದಿ ಎರಚಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..

ಚಿತ್ರದುರ್ಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 1 ವರ್ಷ, 7 ತಿಂಗಳಾದ್ರೂ ಒಳ ಮೀಸಲಾತಿ ವಿಚಾರವಾಗಿ ಆಗಲಿಲ್ಲ.

ಕೇವಲ ಚುನಾವಣೆ, ಮತಗಳಿಗಾಗಿ ಆಯೋಗ ರಚನೆ ಮಾಡಿದ್ದಾರೆ ಅಷ್ಟೆ. ಸುಪ್ರೀಂ ಆದೇಶ ಬಂದು 3 ತಿಂಗಳಾದ್ರೂ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲಾ. ಆಯೋಗ ನೇಮಕ ಮಾಡಿದ ಸರಕಾರ ಅಯೋಗಕ್ಕೆ ಕುರ್ಚಿ, ಟೇಬಲ್ ಕೊಟ್ಟಿಲ್ಲಹಾಗಾಗಿ ಇದೇ 16 ನೇ ತಾರೀಕು ಬೆಳಗಾವಿಯಲ್ಲಿ ಹಕ್ಕೊತ್ತಾಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತೆವೆ..

ದಿನಾಂಕ 21 ರಂದು ಹುಬ್ಬಳ್ಳಿಯಲ್ಲಿ ತಮಟೆ ಚಳುವಳಿ ಸಹ ಮಾಡುತ್ತೆವೆ.ನಮ್ಮ‌ಸಮುದಾಯದ ಎಲ್ಲಾ ಬಂಧುಗಳು ಭಾಗಿಯಾಗಿ.ಒಳ ಮೀಸಲಾತಿಗೆ ಸದನದಲ್ಲಿ ಪಿ.ಎಂ. ನರೇಂದ್ರಸ್ವಾಮಿ ಆಗ್ರಹ ಕುರಿತು ಪ್ರತಿಕ್ರಿಯೆ ಕಾಂಗ್ರೆಸ್ ನವರು ಎಷ್ಟು ಮೂರ್ಖರು ಅಂತಾ .ಅವ್ರು ಮಾದಿಗರನ್ನು ಮೂರ್ಖರಾಗಿ ಮಾಡಲಿಲ್ಲ, ಅವರೇ ಮೂರ್ಖರಾದ್ರು.

ಒಳ ಮೀಸಲಾತಿ ಬಗ್ಗೆ ಯತ್ನಾಳ್ ಸದನದಲ್ಲಿ ಪ್ರಸ್ತಾಪ ಮಾಡಿದ್ರು.ಎರಡು ತಿಂಗಳ ಅವಧಿಯಾದ್ರೂ ಒಳ ಮೀಸಲಾತಿ‌ಮಾಡಲು ಸಿಎಂ ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ.ಸದನದಲ್ಲಿ‌ ಮೂರ್ಖತನ ಪ್ರದರ್ಶನ ಮಾಡಿದ್ದು ಕಾಂಗ್ರೆಸ್ ಶಾಸಕರು, ಕ್ಯಾಬಿನೆಟ್ ಮಂತ್ರಿಗಳು

ನಾವು ನುಡಿದಂತೆ ನಡೀತೆವೆ ಅಂತಾ ಹೇಳೋಕೆ ಒಬ್ಬನೇ ಒಬ್ಬ ಸಚಿವರಿಗೆ ಯೋಗ್ಯತೆ ಇಲ್ಲ.

ಇಂಥ ಸಚಿವರನ್ನು ಇಟ್ಟುಕೊಂಡು ಕ್ಯಾಬಿನೆಟ್ ನಡೆಸುವ ಸಿಎಂ ಗೆ ನಾಚಿಕೆಯಾಗಬೇಕು.ಇಂಪೀರಿಯಲ್ ಡೆಟಾ ಬಗ್ಗೆ ಈಗಾಗಲೇ ಡೈರೆಕ್ಷನ್ ಇದೆ.ಈಗ ಮತ್ತೊಂದು ಆಯೋಗ ರಚನೆ‌ ಮಾಡೋಕೆ ಆಗಲ್ಲ. ಮತ್ತೊಂದು ಆಯೋಗ ಮಾಡೋದು ಅದು ಮೂರ್ಖರ ಕೆಲಸ.ಮಾದಿಗರನ್ಮು ಜೀತದಾಳುಗಳು ಅಂದುಕೊಳ್ಳಬೇಡಿ.3% ಭಯೋತ್ಪಾದಕರು, ಧಂಗೆಕೋರರು, ಹೋರಾಟಗಾರರು ಸರಕಾರ ಕಿತ್ತೊಗೆದಿದ್ದನ್ನು ನೋಡಿದ್ದೇವೆ.ಇಡೀ ದಕ್ಷಿಣ ಭಾರತದಲ್ಲೇ ಮಾದಿಗರ ಸಂಘಟನೆ ಆಗ್ತದೆ.ರಾಜ್ಯದ ಮಾದಿಗರು ಸುಮ್ಮನೇ ಕೈ ಕಟ್ಟಿ ಕೂಡ್ತೀವಿ ಅನ್ಕೋಬೇಡಿ.

ನಮ್ಮ ವಿರುದ್ಧ ಷಡ್ಯಂತ್ರ ಮಾಡೋ ಸರಕಾರ ಕಿತ್ತೆಸೆಯುತ್ತೇವೆ.ನಮ್ಮ ಭಾವನೆಗೆ ತಕ್ಕಂತೆ ನಡೆಯುವ ಸರಕಾರ ತರುತ್ತೇವೆ.ಗುಜರಾತ, ಮಹಾರಾಷ್ಟ್ರ, ರಾಜ್ಯಗಳಿಗಿಂತ ಉಗ್ರ ಹೋರಾಟ ಕರ್ನಾಟಕದಲ್ಲಿ ಮಾದಿಗರ ಹೋರಾಟ ಆಗುತ್ತೆ ನಾನೇ ಅದರ ನೇತೃತ್ವ ವಹಿಸುತ್ತೇನೆ, ನನ್ನ ಮೇಲೆ‌ ಕೇಸ್ ಆಗಲಿ. ಜನ ನನಗೆ ಅದನ್ನು ಎದುರಿಸುವ ಶಕ್ತಿ ಕೊಟ್ಟಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಎ.‌ನಾರಾಯಣಸ್ವಾಮಿ ಹೇಳಿದರು.

Edited By : PublicNext Desk
PublicNext

PublicNext

14/12/2024 04:51 pm

Cinque Terre

8.01 K

Cinque Terre

0

ಸಂಬಂಧಿತ ಸುದ್ದಿ