ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಜಾನುವಾರುಗಳಿಗೆ ಮತ್ತೆ ಕಾಣಿಸಿಕೊಂಡ ಚರ್ಮ ಗಂಟು ರೋಗ- ಎತ್ತು ಮಾರಾಟಕ್ಕೆ ಮುಂದಾದ ರೈತ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತೆ ಚರ್ಮ ಗಂಟು ರೋಗ ಕಾಣಿಸಿಕೊಳ್ಳಲಾರಂಭಿಸಿದೆ. ರೈತರು ತಮ್ಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಕೆಲ ರೈತರಂತೂ ಚರ್ಮ ಗಂಟು ರೋಗಕ್ಕೆ ಬೇಸತ್ತು ಎತ್ತುಗಳ ಮಾರಾಟಕ್ಕೂ ಮುಂದಾಗಿದ್ದಾರೆ.

ಜಾನುವಾರು ಮಾರುಕಟ್ಟೆಗೆ ತಂದು ಸಿಕ್ಕ ಸಿಕ್ಕ ದರಕ್ಕೆ ಎತ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಕುರಿತಂತೆ ಪಶುವೈದ್ಯರಿಗೆ ತೋರಿಸಿದ್ದೇವೆ. ಅವರು ಹೇಳಿದಂತೆ ಮುಲಾಮು ಔಷಧಿ ನೀಡಿದ್ದೇವೆ. ಆದರೂ ಸಹ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದರು.

ಚಿಕಿತ್ಸೆಗೆ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಮಾರುಕಟ್ಟೆಗೆ ಎತ್ತುಗಳನ್ನು ಮಾರಾಟಕ್ಕೆ ತಂದರೆ ಇಲ್ಲಿ ದಲ್ಲಾಳಿಗಳು ಬಾಯಿಗೆ

ಬಂದ ದರಕ್ಕೆ ಎತ್ತುಗಳನ್ನು ಕೇಳುತ್ತಿದ್ದಾರೆ ಎಂದು ರೈತರು ಬೇಸರದಿಂದ ತಿಳಿಸಿದರು. ಆರೋಗ್ಯವಂತ ಎತ್ತುಗಳಿಗೆ 60 ಸಾವಿರ ರೂಪಾಯಿ ಕೇಳಿದರೆ ಈ ರೀತಿಯ ಎತ್ತುಗಳಿಗೆ 10 ಸಾವಿರ, 15 ಸಾವಿರ ರೂಪಾಯಿ ಕೇಳುತ್ತಿದ್ದಾರೆ ಎಂದು ರೈತರು ನೋವು ವ್ಯಕ್ತಪಡಿಸಿದರು.

Edited By : Shivu K
PublicNext

PublicNext

13/12/2024 10:21 pm

Cinque Terre

16.94 K

Cinque Terre

1