ಬೀದರ್: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಗಲಿಕೆಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಶೋಕ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ. ನಾಡು ಕಂಡ ಬುದ್ಧಿವಂತ, ವಿಜನರಿ ನಾಯಕರಾಗಿದ್ದರು. ಬೆಂಗಳೂರಿಗೆ
ಐಟಿ-ಬಿಟಿ, ಸಾಫ್ಟ್‌ವೇರ್ ಹಬ್ ಮಾಡಲು ಭದ್ರ ಬುನಾದಿ ಹಾಕಿದ್ದರು. ಭವಿಷ್ಯದ ಕರ್ನಾಟಕ, ಆಧುನಿ ಕರ್ನಾಟಕ ಹೇಗಿರಬೇಕೆಂಬ ಕನಸು ಕಂಡು ಆ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದರು. ಪಕ್ಷಾತೀತ ಎಲ್ಲ ರಾಜಕಾರಣಿಗಳಿಗೂ ಮಾರ್ಗದರ್ಶನ ಮಾಡುವ ವಿಶಿಷ್ಟ ಗುಣ ಹೊಂದಿದ ಅಪರೂಪದ ನೇತಾರರಾಗಿದ್ದರು. ಅವರ ಅಗಲಿಕೆಯಿಂದ ಕರ್ನಾಟಕ ಮಾತ್ರವಲ್ಲ, ಇಡೀ ದೇಶವೇ ಒಬ್ಬ ಅಭಿವೃದ್ಧಿಪರ ಚಿಂತಕ ಮುತ್ಸದ್ಧಿಯನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Kshetra Samachara
10/12/2024 01:46 pm