ಭಾಲ್ಕಿ :: ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ೫ನೇ ತರಗತಿ ವಿದ್ಯಾರ್ಥಿ ಮೇಲೆ ಅತ್ಯಾಚಾರ ಎಸೆದ ಶಿಕ್ಷಕನನ್ನು ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ತಾಲೂಕ ಕರ್ನಾಟಕ ಹೊಯ್ಸಳ ವೇದಿಕೆ ಸಂಘಟನೆ ವತಿಯಿಂದ ಮಂಗಳವಾರ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು
ಯಡ್ರಾಮಿ ಪಟ್ಟಣದಲ್ಲಿ ನಡೆಸುತ್ತಿರುವ ಆ ಖಾಸಗಿ ಶಾಲೆಯ ಮಾನ್ಯತೆ ರದ್ಧುಪಡಿಸಬೇಕು. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕ್ರೂರ ಶಿಕ್ಷಕನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಬಾಲಕಿಯ ಕುಟುಂಬಕ್ಕೆ ಸೂಕ್ತ ಭದ್ರತೆ ಹಾಗೂ ಸರಕಾರದ ನೆರವು ನೀಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಲಾಯಿತು. ಬೀದರ ಜಿಲ್ಲಾಧ್ಯಕ್ಷರಾದ ಸಂತೋಷ ನಾಟೇಕರ ಮನವಿ ಪತ್ರ ಸಲ್ಲಿಸಿ ಮಾತನಾಡಿ
ಯಡ್ರಾಮಿಯ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಕಾಮುಕ ಶಿಕ್ಷಕನಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು . ಬಾಲಕಿ ಕುಟುಂಬಕ್ಕೆ ೩೦ ಲಕ್ಷ ಪರಿಹಾರ ಘೋಷಿಸಬೇಕು,ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಹುದ್ದೆ ನೀಡಬೇಕೆಂದು ಸಂತೋಷ್ ನಾಟೇಕರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉತ್ತರ ಕರ್ನಾಟಕ ಉಸ್ತುವಾರಿಗಳು ಸಂಜು ಬಿರಾದಾರ ನವದಗಿ, ಸಜ್ಜನ್ ಶೆಟ್ಟಿ , ರಾಜಕುಮಾರ ಡಾವರ್ಗವೆ, ಸಚಿನ್ ಅಂಬೆಸಾಂಗವಿ, ಸಿದ್ದು ಜಮಾದಾರ್, ಗಣೇಶ ರಾಥೋಡ್, ಗೋಪಿ ದೇವಿದಾಸ, ಸುರೇಶ, ಕಾಂಬಳೆ, ಮಹದೇವ್ ಸೂರ್ಯವಂಶಿ, ಚಂದ್ರಕಾಂತ್ ಮೈಲಾರೆ, ದೇವಿದಾಸ್ ಲಜವಾಡ, ಧೂಳಪ್ಪ ಮಡಿವಾಳ, ಭಾಗ್ಯೇಶ ಚಿರಾಲಳೆ, ಸಚಿನ್ ಹುಪ್ಳೆ, ಹಲವಾರು ಜನ ಇದ್ದರು.
Kshetra Samachara
10/12/2024 01:43 pm