ಬೆಂಗಳೂರು : ಸೀತಾರಾಮ ,ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ಮನಗೆದ್ದಿರುವ ನಟಿ ಪ್ರೀಯಾ ಅಲಿಯಾಸ್ ಮೇಘನಾ ಶಂಕರಪ್ಪ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ಜೊತೆ ಫೋಟೋ ಹಂಚಿಕೊಂಡು ಎಂಗೇಜ್ ಆಗಿರೋದಾಗಿ ತಿಳಿಸಿದ್ದಾರೆ.
ಸದ್ಯದಲ್ಲೇ ನಟಿ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಭಾವಿ ಪತಿ ಜೊತೆಗಿನ ವಿಶೇಷ ವಿಡಿಯೋ ಹಂಚಿಕೊಂಡು ಫ್ಯಾನ್ಸ್‌ಗೆ ಪರಿಚಯಿಸಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸಿನಿಮಾ ಸ್ಟೈಲಿನಲ್ಲಿ ಭಾವಿ ಪತಿಯನ್ನು ನಟಿ ಪರಿಚಯಿಸಿದ್ದಾರೆ. ರೆಸ್ಟೋರೆಂಟ್‌ವೊಂದರಲ್ಲಿ ಕಾಫಿ ಕುಡಿಯಲು ಬಂದು ಆ ನಂತರ ಪಾರ್ಟ್ನರ್ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ. ಜೋಡಿ ಅಂತೂ ಸಕ್ಕತ್ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
PublicNext
07/12/2024 04:22 pm