ನವದೆಹಲಿ : ನಂದಿನಿ ಬ್ರ್ಯಾಂಡ್ ಗೆ ದೆಹಲಿಯಲ್ಲಿ ಬೇಡಿಕೆ ಹೆಚ್ಚಿದ ಹಿನ್ನಲೆ ಮಾರುಕಟ್ಟೆಯಲ್ಲಿ ಹಾಲು ಸಿಗದಂತೆ ಕಿರಾತಕರು ಸ್ಕೆಚ್ ಹಾಕುತ್ತಿದ್ದಾರೆ. ನಂದಿನಿ ಹಾಲನ್ನು ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಿ ಜನಸಾಮಾನ್ಯರಿಗೆ ಹಾಲು ಸಿಗದಂತೆ ಮಾಡ್ತಾ ಇದ್ದಾರಂತೆ.
ಜೊತೆಗೆ ನಂದಿನಿ ಬ್ರ್ಯಾಂಡ್ ಪ್ರಚಾರಕ್ಕಾಗಿ ಹಾಕಲಾಗಿದ್ದ ಬ್ಯಾನರ್ ಸುಟ್ಟುಹಾಕಿದ್ದು ಇತರ ಹಾಲು ಉತ್ಪಾದಕರು ಇನ್ನು ನಂದಿನಿ ಬ್ರ್ಯಾಂಡ್ ನ ಸ್ಟಾಲ್ ಮುಂದೆ ಪ್ರತಿದಿನ ಬಂದು ನಿಂತು ನಂದಿನಿ ಬ್ರ್ಯಾಂಡ್ ನ ಉತ್ಪನ್ನ ಖರೀದಿ ಮಾಡದಂತೆ ತಡೆಯೋ ಯತ್ನ ಮಾಡ್ತಾರಂತೆ. ಇವರ ಕೃತ್ಯ ಮೊಬೈಲ್‌ನಲ್ಲಿ ಸೆರೆಹಿಡಿದು ನಂದಿನಿ ಹಾಲು ಮಾರಾಟ ಮಾಡುವ ಮಹಿಳಾ ಹಂಚಿಕೆದಾರೆ ಪ್ರಶ್ನೆ ಮಾಡಿದ್ದಾರೆ.
ಸದ್ಯ ದೆಹಲಿಯಲ್ಲಿ ನಂದಿನಿ ಬ್ರ್ಯಾಂಡ್ ಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರತಿದಿನ 11 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ದರದಲ್ಲೂ ಅಮೂಲ್ ಮತ್ತು ಮದರ್ ಡೈರಿ ಹಾಲಿಗಿಂತ ಕಡಿಮೆ ಇದೆ.
ಸದ್ಯ ದೆಹಲಿಯಲ್ಲಿ ನಂದಿನಿ ಒಂದು ಲೀಟರ್ ಗೆ 56 ರೂ ಇದ್ರೆ, ಮದರ್ ಡೈರಿ ಮತ್ತು ಅಮೂಲ್ ಹಾಲಿನ ದರ ಹೆಚ್ಚಿದೆ. ಕ್ವಾಲಿಟಿ ವಿಚಾರದಲ್ಲೂ ನಂದಿನಿ ಎರಡು ಹಾಲು ಬ್ರ್ಯಾಂಡ್ ಗಿಂತ ಉತ್ತಮ ಎಂಬ ಚರ್ಚೆ ಹೆಚ್ಚಾಗುತ್ತಿದ್ದು
ಸ್ಥಳಿಯ ಬ್ರ್ಯಾಂಡ್ ಗಳು ನೆಲಕಚ್ಚೊ ಆತಂಕ ಹಿನ್ನಲೆ ಈ ರೀತಿ ಕೃತ್ಯ ನಡೆಯುತ್ತಿದೆ ಎನ್ನಲಾಗ್ತಿದೆ.
PublicNext
04/12/2024 05:34 pm