ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಜಿಲ್ಲಾ ಪೊಲೀಸ್ ವಾರ್ಷಿಕ ಕ್ರಿಡಾಕೂಟಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ

ಕಾರವಾರ: ಪೊಲೀಸರು ಕರ್ತವ್ಯದ ಮಧ್ಯೆ ಕುಟುಂಬ ಹಾಗೂ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರಿಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ನಡೆಯುವ ಯಾವುದೆ ವಿಷಯಗಳು ಕೊನೆಯಲ್ಲಿ ಪೊಲೀಸರ ಬಳಿ ಬರುತ್ತವೆ. ಎಲ್ಲಾ ಸಮಯದಲ್ಲಿಯೂ ಸಂಯಮದಿಂದ ನಡೆದುಕೊಳ್ಳುವ ಅವರು ಪ್ರತಿನಿತ್ಯ ಕೆಲಸ ಮಾಡಿ ಹತಾಷರಾಗಿರುತ್ತಾರೆ. ಈ ವೇಳೆ ಕ್ರೀಡಾಕೂಟದಂತಹ ಮನರಂಜನೆ ಬೇಕಾಗುತ್ತದೆ‌. ಅಲ್ಲದೇ ಇದರಿಂದ ದೈಹಿಕವಾಗಿಯೂ ಸದೃಡರಾಗುತ್ತಾರೆ. ವಿರಾಮವಿಲ್ಲದ ಕೆಲಸ ಮಧ್ಯೆ ಆರೋಗ್ಯ ಹಾಗೂ ಕುಟುಂಬಕ್ಕೂ ಸಮಯ ನೀಡಬೇಕು ಎಂದರು.

ಕಾರವಾರ, ಭಟ್ಕಳ, ಶಿರಸಿ ಹಾಗೂ ದಾಂಡೇಲಿ ಉಪ‌ವಿಭಾಗಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಓಟ, ಜಾವಲಿನ, ಉದ್ದ ಹಾಗೂ ಎತ್ತರ ಜಿಗಿತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

Edited By : PublicNext Desk
Kshetra Samachara

Kshetra Samachara

03/12/2024 07:28 pm

Cinque Terre

2.2 K

Cinque Terre

0