ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬಕ್ಕೆ ಈ ವರ್ಷದ ದಿನಾಂಕ ನಿಗದಿಯಾಗಿದೆ. ಕೊಡಗಿನಾದ್ಯಂತ ಡಿ.ತಿಂಗಳ14 ಕ್ಕೆ ಸಂಭ್ರಮದ ಹುತ್ತರಿ ಹಬ್ಬದ ಆಚರಣೆ ನಡೆಯಲಿದೆ ಎಂದು ಪ್ರಕಟಿಸಲಾಗಿದೆ . ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹುತ್ತರಿ ಹಬ್ಬದ ದಿನಾಂಕ ನಿಗದಿಯಾಗಿದೆ.
ಡಿ. 14ರಂದು ಇಗ್ಗುತಪ್ಪ ದೇವಾಲಯದಲ್ಲಿ ರಾತ್ರಿ 7.30ಕ್ಕೆ ನೆರೆ ಕಟ್ಟುವುದು, 8.30ಕ್ಕೆ ಕದಿರು ಕೊಯ್ಯುವುದು ಹಾಗೂ 9.30 ಕ್ಕೆ ಊಟೋಪಚಾರ ನಡೆಯಲಿದೆ. ಕೊಡಗಿನಾದ್ಯಂತ ಅದೇ ದಿನ 7.50 ಕ್ಕೆ ನೆರೆಕಟ್ಟುವುದು 8.50ಕ್ಕೆ ಕದಿರು ಕೊಯ್ಯುವುದು ಹಾಗೂ 9.50 ಊಟೋಪಚಾರದ ಮುಹೂರ್ತ ನಿಗದಿಯಾಗಿದೆ. ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಹಬ್ಬವನ್ನ ಕೊಡಗಿನಾದ್ಯಂತ ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕೊಡಗಿನ ಹುತ್ತರಿ ಹಬ್ಬವನ್ನು ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ.
PublicNext
29/11/2024 02:47 pm