ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಳ್ಳಿಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳ ನೆರವು, ಎನ್.ಎಸ್.ಎಸ್ ವರ

ಕುಂದಗೋಳ : ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸೈ, ಮಲ್ಲಕಂಬಕ್ಕೂ ಸೈ... ಯೋಗಕ್ಕೂ ಸೈ... ಸ್ವಚ್ಛತೆಗೂ ಸೈ ಎಂದು ಹರಭಟ್ಟ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದತ್ತು ಗ್ರಾಮ ದೇವನೂರಿನ ಅಭಿವೃದ್ಧಿ ರಾಷ್ಟ್ರೀಯ ಸೇವಾ ಶಿಬಿರ ಯೋಜನೆಯ ಸೇವೆ ನೀಡುತ್ತಿದ್ದಾರೆ.

ಹೌದು ! ಕುಂದಗೋಳ ಪಟ್ಟಣದ ಹರಭಟ್ಟ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಎನ್.ಎಸ್.ಎಸ್ ಶಿಬಿರದ ಕಾರ್ಯಕ್ರಮಕ್ಕೆ ದತ್ತು ಗ್ರಾಮವಾಗಿ ದೇವನೂರುನ್ನು ಸ್ವೀಕರಿಸಿ ಅಲ್ಲಿನ ಜನರಿಗೆ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ.

ನಿತ್ಯ ಬೆಳಿಗ್ಗೆ ಯೋಗದಿಂದ ಆರಂಭವಾದ ವಿದ್ಯಾರ್ಥಿಗಳ ದಿನಚರಿ ಸ್ವಚ್ಛತೆ ಆರೋಗ್ಯ ಜಾಗೃತಿಗಾಗಿ ಶ್ರಮದಾನ ಮಾಡಿ ಸಂಜೆ ವೇದಿಕೆ ಕಾರ್ಯಕ್ರಮ ನಡೆಸಿ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನೀಡಿ ಹಳ್ಳಿಗರ ಮನ ಗೆದ್ದಿದ್ದಾರೆ.

ಅದರಲ್ಲೂ ಯೋಗ ಶಿಕ್ಷಣದಲ್ಲಿ ಸಾಧನೆ ಗೈದ ಹರಭಟ್ಟ ಕಾಲೇಜು ಪದವಿ ಪೂರ್ವ ವಿದ್ಯಾರ್ಥಿಗಳು ಯೋಗ ಪ್ರತಿ ಮಜಲನ್ನು ಹಳ್ಳಿಗರಿಗೆ ತೋರಿಸಿ ಇತ್ತ ಮನರಂಜನೆ ಸಾಂಸ್ಕೃತಿಕ ವೈಭವ ಸಾರುತ್ತಿದ್ದಾರೆ.

ಒಟ್ಟಾರೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಎನ್‌.ಎಸ್.ಎಸ್ ಶಿಬಿರ ಹಳ್ಳಿಗಳ ಅಭಿವೃದ್ಧಿಗೆ ವರವಾಗಿದೆ.

Edited By : Nagesh Gaonkar
Kshetra Samachara

Kshetra Samachara

25/11/2024 03:21 pm

Cinque Terre

15.17 K

Cinque Terre

0

ಸಂಬಂಧಿತ ಸುದ್ದಿ