ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ
ಬ್ರಹ್ಮಾವರ: ಕರಾವಳಿಯಗಂಡುಕಲೆ ಯಕ್ಷಗಾನವನ್ನು ಉಳಿಸುವ ಬೆಳೆಸುವ ಹಿನ್ನೆಲೆಯಲ್ಲಿ 17 ವರ್ಷಗಳ ಹಿಂದೆ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್‌ನಿಂದ ರೂಪಿತವಾದ ಕಿಶೋರ ಯಕ್ಷಗಾನ ಸಂಭ್ರಮ 2024 ಶನಿವಾರ ಸಂಜೆಬ್ರಹ್ಮಾವರ ಪ್ರದರ್ಶನ ಸಮಿತಿವತಿಯಿಂದ ಬ್ರಹ್ಮಾವರ ಭಂಟರ ಭವನದ ಬಳಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.
ಆರಂಭದ ವರ್ಷದಲ್ಲಿ ಟ್ರಸ್ಟ್‌ನಿಂದ ಉಡುಪಿಯಲ್ಲಿ ಮಾತ್ರ ನಡೆಯುತ್ತಿದ್ದುದನ್ನು ಅಂದಿನ ಉಡುಪಿ ಕ್ಷೇತ್ರದ ಶಾಸಕ ಕೆ.ರಘುಪತಿ ಭಟ್ ಕ್ಷೇತ್ರದ ವ್ಯಾಪ್ತಿಗೆ ವಿಸ್ತರಿಸಿ ಇಂದು ಜಿಲ್ಲೆಯ 4 ಕ್ಷೇತ್ರದ 91 ಪ್ರೌಢ ಶಾಲೆಯ 3000 ವಿದ್ಯಾರ್ಥಿ ವಿದ್ಯಾರ್ಥಿನಿಯರು. 37 ಯಕ್ಷಗಾನ ಗುರುಗಳಿಂದ ಸಾಂಪ್ರದಾಯಕ ಹೆಜ್ಜೆ, ಅಭಿನಯ, ಮಾತುಗಾರಿಕೆಯಿಂದ ಡಿಸೆಂಬರ್ 30ರ ಅವಧಿಯಲ್ಲಿ 11 ಕಡೆಯಲ್ಲಿ ಪುರಾಣ ಕಥೆಯ ಯಕ್ಷಗಾನ ಸಂಜೆ ಆರರಿಂದ ಒಂಬತ್ತು ಗಂಟೆಯ ಅವಧಿಯಲ್ಲಿ ಎರಡು ತಂಡದ ಪ್ರದರ್ಶನ ನಡೆಯಲಿದೆ.
ಯಕ್ಷಗಾನವನ್ನು ಕಾಣದ ಆಂಗ್ಲ ಮಾಧ್ಯಮಶಾಲೆ ,ಹೊರಜಿಲ್ಲೆಯ ವಿದ್ಯಾರ್ಥಿಗಳು, ಕ್ರಿಶ್ಚಿಯನ್, ಮುಸ್ಲಿಂವಿದ್ಯಾರ್ಥಿಗಳು ಯಕ್ಷಶಿಕ್ಷಣದಲ್ಲಿ ತರಬೇತಿ ಪಡೆದು ಉನ್ನತವ್ಯಾಸಂಗ ಉದ್ಯೋಗದಲ್ಲಿರುವ ಯುವಕ ಯುವತಿಯರ ಕೆಲವರು ಹವ್ಯಾಸವಾಗಿ ಯಕ್ಷಶಿಕ್ಷಣದ ಗುರುಗಳಾಗಿದ್ದಾರೆ.
ನೀಲಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ರಘುರಾಮ ಮಧ್ಯಸ್ಥ,ಪ್ರದರ್ಶನ ಸಮಿತಿಯ ಸುಧೀರ್ ಕುಮಾರ್ ಶೆಟ್ಟಿ, ರಾಜೀವ ಕುಲಾಲ್, ಭುಜಂಗ ಶೆಟ್ಟಿ,ಬೈಕಾಡಿ ಸುಪ್ರಸಾದ್ ಶೆಟ್ಟಿ,ಧನಂಜಯ್ ಅಮೀನ್, ಬಿ.ಎನ್ ಶಂಕರ ಪೂಜಾರಿ, ನಿತ್ಯಾನಂದ ಬಿ ಆರ್, ಉಪಸ್ಥಿತರಿದ್ದರು.
ಸರಕಾರದಿಂದ ಅನುದಾನರಹಿತವಾಗಿ ಕಲಾಸಕ್ತರು, ಶಾಸಕರು, ದಾನಿಗಳು ಮತ್ತು ಸಾರ್ವನಿಕರಿಂದ ನಡೆಯುವ ಕಾರ್ಯಕ್ರಮಕ್ಕೆ ಪ್ರತೀಪ್ರಸಂಗಕ್ಕೆ ಭಾಗವತರು, ಚಂಡೆ, ಮದ್ದಳೆ, ಪ್ರಸಾಧನಕಲೆ ಸ್ವಯಂಸೇವಕರು ಸೇರಿದಂತೆ ಸಹಸ್ರಾರು ಜನರ ಕಲಾಪ್ರೀತಿ ಮತ್ತು ಕಲೆಯ ಉಳಿವಿನ ಶ್ರಮಕ್ಕೆ ಸಾರ್ವಜನಿಕರ ಸಹಕಾರ ಪ್ರೋತ್ಸಾಹ ಬೇಕಾಗಿದೆ.
Kshetra Samachara
24/11/2024 07:36 pm