ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ: ಮಕ್ಕಳಲ್ಲಿ ಅಡಗಿರುವ ವಿಶೇಷ ಜ್ಞಾನದ ಪ್ರದರ್ಶನ

ರಬಕವಿ-ಬನಹಟ್ಟಿ: ಮಕ್ಕಳು ಕಲಿಕೆಯ ಜೊತೆಗೆ ಅವರಲ್ಲಿ ಅಡಗಿರುವ ವಿಶೇಷ ಜ್ಞಾನವನ್ನು ಪ್ರದರ್ಶಿಸುವ ವೇದಿಕೆ ಇದಾಗಿದೆ. ಕಲೆ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಮಕ್ಕಳ ಪ್ರಾಯೋಗಿಕ ಕಲಿಕೆಯು ಪ್ರದರ್ಶನದಲ್ಲಿ ಕಾಣಸಿಗುತ್ತಿದ್ದು, ಅವರ ಪ್ರತಿಭೆ ದೇಶದ ಆಸ್ತಿಯಾಗಲಿ ಎಂದು ಮಕ್ಕಳ ಪರವಾಗಿ ಸ್ಥಳೀಯ ಹಿರೇಮಠದ ಗಂಗಾಧರದೇವರು ಹಾರೈಸಿದರು.

ತೇರದಾಳ ಸ್ಥಳೀಯ ಡ್ರಿಂ ಕಿಡ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ವಸ್ತು ಪ್ರದರ್ಶನ ಹಾಗೂ ಆಹಾರ ಮೇಳಕ್ಕೆ ಚಾಲನೆ ನೀಡಿ, ಅವರು ಮಾತನಾಡಿ, ಅಲ್ಲಮಪ್ರಭುದೇವರ ನೂತನ ದೇವಸ್ಥಾನ ಮಾದರಿ ಕ್ಷೇತ್ರದ ಪ್ರತೀಕವಾಗಿದೆ. ಸೆಟ್‍ಲೈಟ್ ಉಡಾವಣೆ ಸೇರಿದಂತೆ ರಾಷ್ಟ್ರ-ಅಂತರರಾಷ್ಟ್ರೀಯ ಚಿಂತನೆಗಳನ್ನು ಮಕ್ಕಳು ತಮ್ಮ ಪ್ರದರ್ಶನದ ಮೂಲಕ ಪರಿಚಯಿಸಿರುವುದು ಎಲ್ಲಾ ವಿಷಯಗಳ ಪ್ರತಿಭಾ ಅನಾವರಣದ ಪ್ರಾತ್ಯಕ್ಷಿಕೆಯಾಗಿದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಇಷ್ಟೊಂದು ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಚೇರಮನ್ ಶ್ರೀಶೈಲ ಹಿರೇಮಠ, ಹಿರಿಯರಾದ ಹನಮಂತ ರೋಡನ್ನವರ, ರಾಜು ಸರಿಕರ, ಡಾ.ಸುರೇಶ ಮಳ್ಳನ್ನವರ, ಮುನ್ನಾ ತಾಂಬೋಳಿ, ಮುಖ್ಯಗುರು ಅಶ್ವಿನಿ ಹಿರೇಮಠ, ಶಿಕ್ಷಕರು ಹಾಗೂ ಹಿರಿಯರು, ಪಾಲಕರು ಇದ್ದರು.

ವಸ್ತು ಪ್ರದರ್ಶನದಲ್ಲಿ ಮಕ್ಕಳು ರೊಬೋಟ್ ಮಾದರಿ, ಚಂದ್ರಯಾನ, ಇಲೇಕ್ಟ್ರಿಕಲ್ ಜೇಕ್, ಕೃಷಿ ತಂತ್ರಜ್ಞಾನ ಸೇರಿದಂತೆ ಹತ್ತುಹಲವಾರು ಪ್ರಾತ್ಯಕ್ಷಿಕೆಗಳು ಹಾಗೂ ಮಕ್ಕಳೇ ತಯಾರಿಸಿದ ಆಹಾರ ಪ್ರದರ್ಶನಗಳು ಪಾಲಕರು ಹುಬ್ಬೇರುವಂತೆ ಮಾಡಿದವು.

Edited By : PublicNext Desk
Kshetra Samachara

Kshetra Samachara

24/11/2024 12:05 pm

Cinque Terre

2.64 K

Cinque Terre

0