ಬಜಪೆ: ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ರಾಜ್ಯ ಹೆದ್ದಾರಿಯು ಹೊಂಡಾಗುಂಡಿಗಳಿಂದ ತುಂಬಿ ಹೋಗಿದ್ದು, ವಾಹನ ಸವಾರ ರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.
ಹೆದ್ದಾರಿಯಲ್ಲಿ ಹೊಂಡಗಳು ಉಂಟಾಗಿ ತಿಂಗಳುಗಳೇ ಕಳೆದರೂ ಹೆದ್ದಾರಿಯ ದುರಸ್ತಿ ಕಾರ್ಯದ ಬಗ್ಗೆ ಮಾತ್ರ ಸಂಬಂಧಪಟ್ಟ ಇಲಾಖೆ ಮೌನ ವಹಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನಂಪ್ರತಿ ಸಾವಿರಾರು ವಾಹನಗಳ ಸಂಚಾರವಿದ್ದರೂ ಹೆದ್ದಾರಿಯ ಮರುಡಾಮರೀಕರಣವಾಗದೆ ಕೆಲ ವರ್ಷಗಳೇ ಸಂದಿವೆ.
ಹೆದ್ದಾರಿಯಲ್ಲಿನ ಹೊಂಡಗಳಿಂದ ವಾಹನ ಸವಾರರು ದಿನಂಪ್ರತಿ ಸಮಸ್ಯೆಯನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಅಲ್ಲದೆ, ರಾತ್ರಿ ಸಮಯದಲ್ಲಿ ಹೊಂಡವನ್ನು ಗಮನಿಸದೆ ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ವಾಹನಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ರಾಜ್ಯ ಹೆದ್ದಾರಿಯ ದುರಸ್ತಿ ಕಾರ್ಯದ ಬಗ್ಗೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
24/11/2024 08:16 am