ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: 6 ಗ್ರಾಮ ಪಂಚಾಯತಿಯಲ್ಲಿ ಉಪಚುನಾವಣೆ - ಶೇಕಡಾ 67.061 ಮತದಾನ

ಕಾರ್ಕಳ : ಗ್ರಾಮ ಪಂಚಾಯತ್‌ನ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಇಂದು ಉಪಚುನಾವಣೆ ನಡೆದಿದ್ದು, ಕಾರ್ಕಳ ತಾಲೂಕಿನ 6 ಪಂಚಾಯತ್‌ಗಳಲ್ಲಿ ಶೇಕಡಾ 67.061 ಮತದಾನವಾಗಿದೆ. ಮತ ಎಣಿಕೆಯು ನವೆಂಬರ್‌ 26ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ಇದು ಗ್ರಾಮ ಪಂಚಾಯತ್‌ನಲ್ಲಿ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುರುಷರು 256 ಮಂದಿ, ಮಹಿಳೆಯರು 261 ಮಂದಿ ಮತ ಚಲಾಯಿಸಿದ್ದಾರೆ. ಶೇ 50 ಮತದಾನ ಆಗಿದೆ. ನಲ್ಲೂರು ಗ್ರಾಮ ಪಂಚಾಯತ್‌ನಲ್ಲಿ 272 ಪುರುಷರು, 317 ಮಹಿಳೆಯರು ಮತದಾನ ಮಾಡಿದ್ದಾರೆ. ಶೇಕಡಾ 65.88 ಮತದಾನ ಆಗಿದೆ.

ನಿಟ್ಟೆ ಗ್ರಾಮ ಪಂಚಾಯತ್‌ನಲ್ಲಿ 276 ಪುರುಷರು, 305 ಮಹಿಳೆಯರು ಮತದಾನ ಮಾಡಿದ್ದಾರೆ. 68.67 ಮತದಾನ ಆಗಿದೆ.

ನೀರೆ ಗ್ರಾಮ ಪಂಚಾಯತ್ ನಲ್ಲಿ 242 ಪುರುಷರು, 278 ಮಹಿಳೆಯರು ಮತದಾನ ಮಾಡಿದ್ದಾರೆ. ಶೇ.63.64 ಮತದಾನ ಆಗಿದೆ.

ಕೆರ್ವಾಶೆ ಗ್ರಾಮ ಪಂಚಾಯತ್ ನಲ್ಲಿ 291 ಪುರುಷರು, 303 ಮಹಿಳೆಯರು ಮತದಾನ ಮಾಡಿದ್ದಾರೆ. ಶೇ 78.15 ಮತದಾನ ಆಗಿದೆ.

ಕಡ್ತಲ ಕುಕ್ಕುಜೆ ಚುನಾವಣೆಯಲ್ಲಿ 320 ಪುರುಷ, 340 ಮಹಿಳೆಯರು ಮತ ಚಲಾಯಿಸಿದ್ದಾರೆ. ಒಟ್ಟು ಶೇ 81ಮತದಾನ ಆಗಿದೆ.

ಈದುವಿನಲ್ಲಿ ಅತೀ ಕಡಿಮೆ ಮತದಾನವಾದರೆ, ಕಡ್ತಲದಲ್ಲಿ ಅತೀ ಹೆಚ್ಚು ಮತದಾನ ಆಗಿದೆ.

Edited By : Vijay Kumar
Kshetra Samachara

Kshetra Samachara

23/11/2024 10:59 pm

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ