ಹೆಬ್ರಿ: ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ನಡೆದ ಪೀತಬೈಲ್ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ. ಎನ್ ಕೌಂಟರ್ ನಡೆದ ಮನೆಯಂಗಳ ಭೀಭತ್ಸ ಘಟನೆಯ ಚಿತ್ರಣವನ್ನು ಸಾರಿ ಸಾರಿ ಹೇಳುತ್ತಿದೆ. ಒಡೆದು ಹೋದ ತುಳಸಿಕಟ್ಟೆ ,ಅಡಿಕೆ ಮರದಲ್ಲೇ ಉಳಿದ ಬುಲೆಟ್ ಎನ್ ಕೌಂಟರ್ ಭೀಕರತೆಗೆ ಸಾಕ್ಷಿಯಾಗಿದೆ.
10 ವರ್ಷಗಳ ಬಳಿಕ ಆ ಊರಿನಲ್ಲಿ ಗುಂಡಿನ ಸದ್ದು ಕೇಳಿದೆ. ಮೋಸ್ಟ್ ವಾಂಟೆಡ್ ನಕ್ಸಲ್ ನನ್ನು ಹೊಡೆದು ಹಾಕಿದ ಜಾಗ ಅಕ್ಷರಶಃ ಯುದ್ಧ ಭೂಮಿಯಂತೆ ಗೋಚರಿಸುತ್ತಿದೆ. ವಿಚಿತ್ರ ಮೌನವೊಂದು ಎನ್ಕೌಂಟರ್ ಭೀಕರತೆಯನ್ನು ಸಾರಿ ಹೇಳುತ್ತಿದೆ. ಮೋಸ್ಟ್ ವಾಂಟೆಡ್ ನಕ್ಸಲ್ ,ಸಾಕೇತ್ ರಾಜನ್ ಶಿಷ್ಯ ವಿಕ್ರಂ ಗೌಡ ಎನ್ ಕೌಂಟರ್ ಗೆ ಬಲಿಯಾದ ಜಾಗ ಇದು...ಹೆಬ್ರಿ ತಾಲೂಕಿನ ಪೀತಬೈಲ್ ಜಯಂತ್ ಗೌಡ ಮನೆಯ ದೃಶ್ಯ .ಇದೇ ಅಂಗಳದಲ್ಲಿ ಗುಂಡಿನ ಸುರಿಮಳೆಗೈದು ANF ವಿಕ್ರಂ ಗೌಡನನ್ನು ನೆಲಕ್ಕುರುಳಿಸಿತ್ತು. 20 ವರ್ಷದ ಮಾವೋವಾದಿ ಚಟುವಟಿಕೆಗೆ ಬ್ರೇಕ್ ಆಗಿತ್ತು .ಘಟನೆ ನಡೆದು ನಾಲ್ಕು ದಿನ ಕಳೆದರೂ ಆ ಭೀಕರತೆ ಇನ್ನೂ ಮಾಸಿಲ್ಲ. ಮನೆಯ ಅಂಗಳದ ತುಳಸಿ ಕಟ್ಟೆ ,ಅಡಿಕೆ ಮರ ಇದೆಲ್ಲವೂ ವಿಕ್ರಂ ಗೌಡ ಎನ್ ಕೌಂಟರ್ ಭೀಕರತೆಯನ್ನು ಸಾರಿ ಸಾರಿ ಹೇಳುತ್ತಿವೆ.
ಇದೇ ಮನೆಯ ಹೊರಾಂಗಣದಲ್ಲಿ ವಿಕ್ರಂ ಗೌಡ ಶವ ಬಿದ್ದಿತ್ತು .ಅಸಲಿಗೆ ಒಂದೆರಡು ರೌಂಡ್ ಫೈರಿಂಗ್ ಅಲ್ಲ .ವಿಕ್ರಂ ಗೌಡನನ್ನು ಕಂಡ ಕೂಡಲೇ ANF ಅಧಿಕಾರಿಗಳು ಗುಂಡಿನ ಸುರಿಮಳೆಗೈದಿದ್ದಾರೆ. ಆ ಭೀಕರತೆಗೆ ಸಾಕ್ಷಿಯಾಗಿ ಮನೆಯ ತುಳಸಿ ಕಟ್ಟೆ, ಸುತ್ತಲಿನ ಅಡಿಕೆ ಮರಗಳ ಮೇಲೆ ಗುಂಡು ಹಾಗೆ ಬಾಕಿ ಉಳಿದಿದೆ. ವಿಕ್ರಂ ಗೌಡ ಸುಸಜ್ಜಿತ ಮಿಷನ್ ಗನ್ ಜೊತೆ ಬಂದಿದ್ದ. ANF ಅಧಿಕಾರಿಗಳು ವಿಕ್ರಂ ಗೌಡ ಬರುವಿಕೆಯನ್ನು ಕಾದು ಕುಳಿತು ಮನೆಯ ಹೊರಗಿನಿಂದಲೇ ಗುಂಡಿನ ಪ್ರಹಾರ ನಡೆಸಿರುವ ಸಾಧ್ಯತೆ ಇದೆ. ಮನೆಯ ಹೊಸ್ತಿಲಲ್ಲೇ ವಿಕ್ರಂ ಕುಸಿದು ಬಿದ್ದ ಕುರುಹು ಇದೆ .ಗುಂಡು ಪತ್ತೆಯಾದ ಸ್ಥಳದಲ್ಲೇ ಪೊಲೀಸರು ಮಾರ್ಕಿಂಗ್ ಮಾಡಿದ್ದಾರೆ .ಅಸಲಿಗೆ ಪೀತಬೈಲ್ ಯಾವ ರೀತಿ ಉದ್ವಿಗ್ನವಾಗಿತ್ತು ಅನ್ನೋದಕ್ಕೆ ಅಳಿದುಳಿದ ಈ ಕುರುಹುಗಳೇ ಸಾಕ್ಷಿಯಾಗಿದೆ.
ಇನ್ನೊಂದು ಕಡೆಯಿಂದ ಮುಂದೇನಾಗುತ್ತೋ ಎಂದು ಜನ ಆತಂಕದಲ್ಲಿದ್ದಾರೆ. ಎನ್ ಕೌಂಟರ್ ನಡೆದ ಪ್ರದೇಶದ ಜನರಿಗೆ ಪೊಲೀಸರು ಸೂಕ್ತ ಭದ್ರತೆ ನೀಡೋ ಅವಶ್ಯಕತೆ ಇದೆ.
PublicNext
23/11/2024 03:32 pm