ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಒಳ ಒಪ್ಪಂದದಿಂದ ಬಿಜೆಪಿಗೆ ಸೋಲಾಗಿದೆ - ಶಾಸಕ ಯತ್ನಾಳ್

ಚಿಕ್ಕೋಡಿ: ಒಳ ಒಪ್ಪಂದದಿಂದಾಗಿ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಲ್ಲಿ ಬಿಜೆಪಿಗೆ ಸೋಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದನ್ನ ರಾಜ್ಯಾಧ್ಯಕ್ಷರಿಗೆ ಪ್ರಶ್ನೆ ಕೇಳ್ರೀ, ಅವರ ನಾಯಕತ್ವ ಜನರು ಒಪ್ಪಿದ್ದಾರೋ ಇಲ್ಲವೋ ಅವರಿಗೆ ಗೊತ್ತು. ನಿನ್ನೆ ದೆಹಲಿಯಲ್ಲಿ ಎಲ್ಲಾ ಬಾಗಿಲು ಬಂದಾಗಿ, ಒಂದೇ ಬಾಗಿಲು ಇರುತ್ತೆ ಅಂತಾ ಹೇಳಿದ್ದಾರೆ.

ಎಲ್ಲಾ ಬಾಗಿಲು ಬಂದಾಗಿ, ಬಿಜೆಪಿಗೆ ಇಂತಹ ಹೀನಾಯ ಸೋಲು ನಮಗೂ ದುಃಖವಿದೆ. ಹೈಕಮಾಂಡ್ ರಾಜ್ಯಕ್ಕೆ ಉಸ್ತುವಾರಿ ನೇಮಿಸುವಾಗ ಪ್ರಾಮಾಣಿಕರು, ಸಂಸ್ಕಾರ ಇದ್ದವರಿಗೆ ಹಾಕಲಿ. ಯಡಿಯೂರಪ್ಪ, ವಿಜಯೇಂದ್ರ ಸಂದೇಶಕಾರಕನಾಗಿ ಕೆಲಸ ಮಾಡಿದ ಪರಿಣಾಮ ಈ ಫಲಿತಾಂಶ. ಕರ್ನಾಟಕದಲ್ಲಿ ವಿಜಯೇಂದ್ರ ಮಾಡಿದ್ದನ್ನ ತಿರಸ್ಕಾರ ಮಾಡಿದ್ದಾರೆ.

ಪಕ್ಷದ ಹೈಕಮಾಂಡ್ ಪೂಜ್ಯ ತಂದೆ, ಮಗನ ವ್ಯಾಮೋಹ ಬಿಡಬೇಕು ಅಂತಾ ವಿನಂತಿ ಮಾಡ್ತೀನಿ ಅಂದ್ರು. ಇನ್ನು ವಕ್ಫ್ ಬೋರ್ಡ್ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲವಾ ಪ್ರಶ್ನೆಗೆ, ವಕ್ಫ್ ಬೋರ್ಡ್ ಇವಾಗ ಆರಂಭವಾಗಿದೆ, ಇನ್ನೂ ಜನರಿಗೆ ಗೊತ್ತಾಗಬೇಕಿದೆ. ಅದೇ ಮಹಾರಾಷ್ಟ್ರದಲ್ಲಿ ವಕ್ಫ್ ಬೋರ್ಡ್ ವಿಚಾರವಾಗಿಯೇ ಚುನಾವಣೆ ಮಾಡಿದ್ರು. ಉದ್ಭವ ಠಾಕ್ರೆ ಔರಂಗಜೇಬ್ ಸಮಾಧಿಗೆ ಹೋಗಿ ನಮಸ್ಕಾರ ಮಾಡಿದ್ರು. ಉದ್ಭವ ಠಾಕ್ರೆಯನ್ನ ಮಹಾರಾಷ್ಟ್ರ ಜನರು ಮುಳುಗಿಸಿದ್ರು. ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

Edited By : Suman K
PublicNext

PublicNext

23/11/2024 05:50 pm

Cinque Terre

14.82 K

Cinque Terre

1

ಸಂಬಂಧಿತ ಸುದ್ದಿ