ಬೆಳಗಾವಿ: ಶಿಗ್ಗಾವಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಾಠಾಣ ಗೆಲುವು ಖಚಿತವಾಗಿರುವ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಶಿಗ್ಗಾವಿ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಪ್ಲ್ಯಾನ್ ಸಕ್ಸಸ್ ಆಗಿದೆ.
ಶಿಗ್ಗಾವಿ ಮತಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಸತೀಶ್ ಜಾರಕೊಹೊಳಿ, ಶಿಗ್ಗಾವಿಯಲ್ಲಿ ಅಹಿಂದ ಮತಗಳ ಕ್ರೋಢೀಕರಣ ಮಾಡಲು 15 ದಿನಗಳ ಕಾಲ ಅಲ್ಲಿಯೇ ಠಿಕಾಣೆ ಹೊಡಿ ಪ್ಲ್ಯಾನ್ ರೂಪಿಸಿದರು. ಚಿಕ್ಕೋಡಿ ಲೋಕಸಭೆಯಷ್ಟೇ ಗಂಭೀರವಾಗಿ ಪರಿಗಣಿಸಿದ್ದ ಸತೀಶ್ ಜಾರಕೊಹೊಳಿ ಶಿಗ್ಗಾಂವಿ ಬೂತ್ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂಘಟನೆ ಮಾಡಿದ್ದರು.
ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಿಂದಲೇ 400ಕ್ಕೂ ಅಧಿಕ ಜನ ಕಾರ್ಯಕರ್ತರು ಶಿಗ್ಗಾಂವಿ ಮತಕ್ಷೇತ್ರದಲ್ಲಿ ಓಡಾಟ ನಡೆಸಿದರು. ಮುಸ್ಲಿಂ ಅಭ್ಯರ್ಥಿ ಕಣಕ್ಕೆ ಇಳಿಸಿ ಅಹಿಂದ ಮತಗಳ ಕ್ರೋಡೀಕರಣ ಪ್ಲ್ಯಾನ ಮಾಡಿದ್ದು, ಸಕ್ಸಸ್ ಆಗಿದೆ. ಸೈಲೆಂಟ್ ಆಗಿ ಓಡಾಡಿ ಮತದಾರರ ಬೆಂಬಲ ಗಳಿಸುವಲ್ಲಿ ಸತೀಶ್ ಜಾರಕೊಹೊಳಿ ಯಶಸ್ವಿಯಾಗಿದ್ದಾರೆ.
ಇನ್ನೂ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿಯವರ ಗೋಕಾಕ ನಗರದ ಹಿಲ್ ಗಾರ್ಡನ್ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಹಿ ತಿನ್ನಿಸಿ ಶುಭ ಕೋರಿದ್ದಾರೆ.
PublicNext
23/11/2024 02:39 pm