ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಹಿಂದ ಮತ ಕ್ರೋಡೀಕರಣ ಶಿಗ್ಗಾಂವಿ ಗೆಲುವಿಗೆ ಕಾರಣ- ಸತೀಶ್ ಜಾರಕಿಹೊಳಿ ಸಂತಸ

ಬೆಳಗಾವಿ: ಉಪ ಚುನಾವಣೆ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಸರಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮವಿದೆ. ನಮಗೆ ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರದ ಗೆಲುವು ಪ್ಲಸ್ ಆಗಿದೆ. ಶಿಗ್ಗಾಂವಿಯಲ್ಲಿ ಹಿಂದೂ- ಮುಸ್ಲಿಂ ಎಂಬ ಭಾವನೆ ದೂರ ಮಾಡಿದ್ದೇವೆ. ಅಹಿಂದ ಮತ ಚದುರದಂತೆ ನೋಡಿಕೊಂಡೆವು. ವಕ್ಫ್ ವಿವಾದ ಸೃಷ್ಟಿ ಮಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಆರಂಭದಲ್ಲಿ ಸಂಡೂರು ಮಾತ್ರ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ‌

ಆದರೆ, ಎಲ್ಲ ಕ್ಷೇತ್ರದಲ್ಲಿ ಅಹಿಂದ ಮತಗಳು ಒಂದಾಗಿವೆ. ಇಲ್ಲಿಯವರೆಗೆ ಬಸವರಾಜ್‌ ಬೊಮ್ಮಾಯಿವರಿಗೆ ಅಹಿಂದ ಮತಗಳು ಶೇ. 70ರಷ್ಟು ಬರುತ್ತಿದ್ದವು. ಅದನ್ನು ನಾವು ಈ ಬಾರಿ ಬದಲಾವಣೆ ಮಾಡಿದ್ದೇವೆ. ಗೆಲುವಿನ ವಿಶ್ವಾಸ ಇತ್ತು. ಪ್ರತಿ ಚುನಾವಣೆಯನ್ನು ನಮ್ಮ ಚುನಾವಣೆ ಎಂದು ಕೆಲಸ ಮಾಡಬೇಕು. ಅದನ್ನು ನಾವು ಮಾಡಿದ್ದೇವೆ. ಶಿಗ್ಗಾಂವಿ ಗೆಲುವು ಮುಸ್ಲಿಂ ಸಮುದಾಯಕ್ಕೆ ಒಳ್ಳೆಯ ಸಂದೇಶವಾಗಿದೆ. ವಕ್ಫ್‌ ನಲ್ಲಿ ಹಾವೇರಿಯ 650 ಕೇಸ್ ಗಳು ಇವೆ. ಅದರೂ ಜನರು ನಮ್ಮನ್ನು ಬೆಂಬಲಿಸಿದ್ದಾರೆ ಎಂದರು.

ಶಿಗ್ಗಾಂವಿ ಗೆಲುವು ಸತೀಶ್ ಜಾರಕಿಹೊಳಿ‌ಗೆ ಪ್ಲಸ್ ಆಗುತ್ತಾ ಎಂಬ ಪ್ರಶ್ನೆ‌ಗೆ ಉತ್ತರಿಸಿದ ಅವರು, ಇಡೀ ರಾಜ್ಯ ಕೂಡ ಇದನ್ನ ನೋಡ್ತಾಯಿತ್ತು. ಮಾಜಿ ಮುಖ್ಯಮಂತ್ರಿ ಪ್ರಬಲ ರಾಜಕಾರಣಿ ವಿರುದ್ಧ ಚುನಾವಣೆ ಹೇಗೆ ಮಾಡ್ತಾರೆ ಅಂತಾಯಿತ್ತು. ಕೆಲವು ತಂತ್ರಗಾರಿಕೆ, ನಾವು ಹೇಗೆ ಚುನಾವಣೆ ಮಾಡ್ತೇವಿ ಅದೇ ಮಾದರಿಯಲ್ಲಿ ಚುನಾವಣೆ ಮಾಡಿದ್ವಿ. ಈ ರೀತಿ ಚುನಾವಣೆಯನ್ನ ಮಾಡಿದ್ರೇ ರಾಜ್ಯದಲ್ಲಿ ಗೆಲ್ಲುತ್ತೇವೆ. ಮುಸ್ಲಿಮರಿಗೆ‌ ಚುನಾವಣೆಯಲ್ಲಿ ನಿಲ್ಲಿಸುತ್ತಾರೆ, ಹೋಗ್ತಾರೆ ಅಂತಾ ಇತ್ತು. ಈ ಸಾರಿ ಚುನಾವಣೆಯಲ್ಲಿ ಒಂದು ಸಂದೇಶ ಹೋಗಿದೆ. ಮುಸ್ಲಿಮರಿಗೆ‌ ಟಿಕೆಟ್ ಕೊಟ್ರೇ ಗೆಲ್ತಾರೆ ಅಂತಾ ಹೋಗಿದೆ. ಶಿಗ್ಗಾಂವಿ ಗೆಲುವು ನಮಗೆ ಡಬಲ್ ಪ್ರಮೋಷನ್ ಆಗಿದೆ.

ಡಿಸಿಎಂ ಸ್ಥಾನ ಇಲ್ಲದೇ ನಾವು ಇಲ್ಲಿ ಗೆಲ್ಲಿಸಿದ್ದೇವೆ ಎಂದರು.

Edited By : Ashok M
PublicNext

PublicNext

23/11/2024 05:15 pm

Cinque Terre

13.09 K

Cinque Terre

0

ಸಂಬಂಧಿತ ಸುದ್ದಿ