ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕ್ಸಲ್ ಎನ್ ಕೌಂಟರ್ ತನಿಖೆ ಶುರು : ಹೆಬ್ರಿ , ಕಾರ್ಕಳ ಪೊಲೀಸರಿಂದ ತನಿಖೆ

ಹೆಬ್ರಿ : ಉಡುಪಿ ಜಿಲ್ಲೆಯ ಕಬ್ಬಿನಾಲೆ ಸಮೀಪ ಪೀತಬೈಲಿನಲ್ಲಿ ನಡೆದ ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರ ಬೆನ್ನಲ್ಲೇ ಕಾರ್ಕಳ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಯೂ ಆರಂಭಗೊಂಡಿದೆ.

ಕಬ್ಬಿನಾಲೆ ಪರಿಸರದಿಂದ 8 ಕಿ. ಮೀ. ಎತ್ತರದ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ ಘಟನೆ ನಡೆದಿದೆ. ಕಾರ್ಯಾಚರಣೆ ಹೇಗೆ ನಡೆದಿದೆ, ದಾಳಿ-ಪ್ರತಿದಾಳಿ ಹೇಗಾಯಿತು, ಉಳಿದವರು ಗಾಯ ಗೊಂಡಿದ್ದಾರೆಯೇ ಮೊದಲಾದ ಆಯಾಮದಲ್ಲಿ ತನಿಖೆ ನಡೆಯಲಿದೆ.ಜೊತೆಗೆ ವಿಕ್ರಂ ಗೌಡ ಜೊತೆಗಿದ್ದವರು

ಯಾವ ಕಡೆಗೆ ಪರಾರಿಯಾದರು? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕಾರ್ಯಾಚರಣೆ ವೇಳೆ ಮೂರ್ನಾಲ್ಕು ಮಂದಿ ನಕ್ಸಲರು ಇದ್ದು, ಅವರು ಕಾಡಿನ ನಡುವೆ ತಪ್ಪಿಸಿಕೊಂಡಿದ್ದಾರೆ ಎಂದು ನಕ್ಸಲ್ ನಿಗ್ರಹ ಪಡೆ ಪೊಲೀಸರು ಹೇಳಿದ್ದರು.ಈ ಬಗ್ಗೆಯೂ ತನಿಖೆ ನಡೆಯಲಿದೆ.ಎನ್ ಕೌಂಟರ್ ನಡೆದ ಸ್ಥಳ ,ನಕ್ಸಲರು ಓಡಾಡಿದ ಪ್ರದೇಶಗಳು ,ಸ್ಥಳೀಯ ಮನೆಗಳು ಎಲ್ಲ ಕಡೆ ತೆರಳಿ ಪೊಲೀಸರು ಮಾಹಿತಿ ಸಂಗ್ರಹಿಸಲಿದ್ದಾರೆ.

Edited By : Suman K
PublicNext

PublicNext

22/11/2024 03:07 pm

Cinque Terre

14.66 K

Cinque Terre

1

ಸಂಬಂಧಿತ ಸುದ್ದಿ