ಬಿಗ್ ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದ ಒಂದು ವಾರದೊಳಗೆ ಮಾತಿನ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಆದರೆ ಆಟದ ಮೂಲಕ ತಮ್ಮನ್ನು ತಾವು ಸಾಬೀತು ಪಡಿಸಲು ವಿಫಲರಾಗಿದ್ದಾರೆ.
ರಜತ್ ತಮ್ಮ ಅತಿಯಾದ ವರ್ತನೆಯಿಂದ ಮನೆಮಂದಿಯ ಕಣ್ಣಿಗೆ ಗುರಿಯಾಗಿದ್ದಾರೆ.ಟಾಸ್ಕ್ ಆಡುವ ವಿಚಾರದಲ್ಲಿ ಸುರೇಶ್ ಅವರೊಂದಿಗೆ ಮಾತಿನ ಚಕಮಕಿಗಿಳಿದ ರಜತ್ ಗುಗ್ಗು, ಸೆಡೆ ಎಂಬ ಪದವನ್ನು ಬಳಸಿದ್ದರು. ಇದು ಸುರೇಶ್ ಸೇರಿದಂತೆ ಮನೆಮಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಒಂದಷ್ಟು ಪದಗಳನ್ನು ಬಳಸಿದ್ದಾರೆ. ಅದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲವೆಂದು ಸ್ಪರ್ಧಿಗಳು ರಜತ್ ಅವರಿಗೆ ಕಳಪೆ ಪಟ್ಟವನ್ನು ಕೊಟ್ಟಿದ್ದಾರೆ. ಸೆಡೆ ನನ್ಮಗ ಅಂದ್ರೆ ಯಾರು. ವೈಯಕ್ತಿಕವಾಗಿ ಬಂದ ಮಾತನ್ನು ತೆಗೆದುಕೊಳ್ಳಲು ಆಗಿಲ್ಲವೆಂದು ಸುರೇಶ್ ಹೇಳಿದ್ದಾರೆ.
ಎಲ್ಲರ ಕಾರಣವನ್ನು ಕೇಳಿ ರಜತ್ ಗರಂ ಆಗಿದ್ದಾರೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದ್ದಷ್ಟು ಸುಲಭವಲ್ಲ ಬಿಗ್ ಬಾಸ್ ಗೆಲ್ಲೋದು. ಸೆಡೆಗಳನ್ನು ಕಳ್ಸಿಯೇ ನಾನು ಮನೆಗೆ ಹೋಗುವುದು. ಹುಟ್ಟಿದಾಗಿನಿಂದ ಹೀಗೆಯೇ ಇರೋದು. ಮುಂದೆಯೂ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತನಾಡುತ್ತೇನೆ. ಇನ್ಮುಂದೆ ಆಟ ಶುರುವೆಂದಿದ್ದಾರೆ.
PublicNext
22/11/2024 01:23 pm