ಕಾರವಾರ : ಜಿಲ್ಲೆಯಲ್ಲಿ ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ನ.23 ರಂದು ಉಪಚುನಾವಣೆ ನಡೆಯಲಿದ್ದು, ಅಂದು ಮತ ಕ್ಷೇತ್ರದ ಸರಕಾರಿ, ಸರೆ ಸರಕಾರಿ ಶಾಲಾ ಕಾಲೇಜುಗಳಿಗೆ ಮತ್ತು ನೌಕರರಿಗೆ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ.
ಜಿಲ್ಲಾಡಳಿತದ ಈ ಆದೇಶವು ತುರ್ತು ಸೇವೆಗಳ ಮೇಲೆ ಇರುವ ಸರಕಾರಿ ನೌಕರರಿಗೆ ಅನ್ವಹಿಸುವುದಿಲ್ಲ. ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಕಚೇರಿಯ ಮುಖ್ಯಸ್ಥರು ಕ್ರಮ ವಹಿಸಬೇಕು. ಚುನಾವಣಾ ನಿಯೋಜಿಸಿರುವ ಎಲ್ಲಾ ಸರಕಾರಿ ನೌಕರರು ಚುನಾವಣೆ ಕಾರ್ಯಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
21/11/2024 08:00 pm