ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮಣಿಕಲ್ಲು ಶ್ರೀ ಅರ್ಭಕ ಧಾರಕೇಶ್ವರಿ ದೇವಸ್ಥಾನ- ಬಿಲ್ಲಾಡಿ ಮನೆಯಲ್ಲಿ ನ. 23ರಿಂದ ಅಷ್ಟಮಂಗಲ ಪ್ರಶ್ನೆ

ಮಂದಾರ್ತಿ: ಮಣಿಕಲ್ಲು ಶ್ರೀ ಅರ್ಭಕ ಧಾರಕೇಶ್ವರಿ ದೇವಸ್ಥಾನ ಹಲವು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ. ಪ್ರಕೃತಿಯ ಮಡಿಲಲ್ಲಿನ ಈ ಕಾರಣೀಕ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಆಗಮಿಸುತ್ತಾರೆ.

ಕ್ಷೇತ್ರದಲ್ಲಿ ಈಗ ಅಭಿವೃದ್ಧಿ ಕುಂಠಿತವಾಗಿದ್ದು, ಬಿಲ್ಲಾಡಿ ಮನೆಯ ಕಾವೇರಿ ಶೆಡ್ತಿ ಕವರಿನವರು ಕ್ಷೇತ್ರದ ಅಭಿವೃದ್ಧಿಗೆ ಹೊರಟಿದ್ದು ಅದಕ್ಕೆ ನೈಲಾಡಿ ಮನೆ ಅಶೋಕ್ ಕುಮಾರ್ ಶೆಟ್ಟಿ ಮತ್ತು ಬಿಲ್ಲಾಡಿ ಭಾಸ್ಕರ ಹೆಗ್ಡೆ ಸಹಚರರು ಅಡ್ಡಗಾಲು ಹಾಕಲು ಹೊರಟಿದ್ದಾರೆ.1893ರ ದಾಖಲೆ ಪತ್ರ ,1907ರ ದಾಖಲೆ ಪತ್ರ ,1996 ರ ದಾಖಲೆ ಪತ್ರ... ಇವು ಮಣಿಕಲ್ಲಿನ ಆಡಳಿತಕ್ಕೆ ಸಂಬಂಧಪಟ್ಟ ಪ್ರಮುಖ ದಾಖಲೆಗಳಾಗಿದ್ದು, ಇವು ಬಿಲ್ಲಾಡಿ ಮನೆ ಕಾವೇರಿ ಶೆಡ್ತಿಯವರ ಕವರಿನವರಿಗೆ ಸೇರಿರುತ್ತದೆ.

ಮಣಿಕಲ್ಲು ದೇವಸ್ಥಾನದ ಆಡಳಿತಕ್ಕೆ ಸಂಬಂಧವಿಲ್ಲದ ವ್ತಕ್ತಿಗಳಾದ ನೈಲಾಡಿ ಮನೆ ಅಶೋಕ್ ಕುಮಾರ್ ಶೆಟ್ಟಿ ಮತ್ತು ಬಿಲ್ಲಾಡಿ ಭಾಸ್ಕರ ಹೆಗ್ಡೆ ಅವರು ನವೆಂಬರ್ 16ರಂದು ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ನವೆಂಬರ್ 23ರಿಂದ 25ರ ವರೆಗೆ ನಡೆಯುವ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮಕ್ಕೂ ಅವರಿಗೂ ಸಂಬಂಧವಿಲ್ಲ ಎಂಬಂತೆ ಸುಳ್ಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ದೇಗುಲದ ಆಡಳಿತವು ಬಿಲ್ಲಾಡಿಮನೆ ಕಾವೇರಿ ಶೆಡ್ತಿ ಕವರಿನ ಪರವಾಗಿ ಬಿಲ್ಲಾಡಿ ಮನೆ ಶಂಕರ ಶೆಟ್ಟಿಯವರು ನಡೆಸುತ್ತಿದ್ದು, ಸಿವಿಲ್ ನ್ಯಾಯಾಲಯದ ಅಸಲು ದಾವೆ ನಂಬ್ರ 262/2024 ರ ತೀರ್ಪು ಕೂಡ ಅವರ ಕವರಿನ ಪರವಾಗಿದೆ. ದೇವಸ್ಥಾನದ ದೋಷ ಪರಿಹಾರ ಮತ್ತು ಅಭಿವೃದ್ಧಿಗಾಗಿ ಅಷ್ಟಮಂಗಲ ಪ್ರಶ್ನೆ ಸೇವೆಯನ್ನು ಹಮ್ಮಿಕೊಂಡಿದ್ದು, ಆಡಳಿತಕ್ಕೆ ಸಂಬಂಧ ಪಡದ ನೈಲಾಡಿಮನೆ ಅಶೋಕ್ ಕುಮಾ‌ರ್ ಶೆಟ್ಟಿ ಮತ್ತು ಬಿಲ್ಲಾಡಿ ಭಾಸ್ಕರ ಹೆಗ್ಡೆ ಮತ್ತು ಸಹಚರರು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ.

ದೇಗುಲದ ಮೊಕ್ತೇಸರರು ಎನ್ನುವ ಬಗ್ಗೆ ಅವರಲ್ಲಿ ಯಾವುದೇ ದಾಖಲೆ ಇಲ್ಲ. ಅವರು ನೀಡಿರುವ ಪತ್ರಿಕಾ ಪ್ರಕಟನೆಯಿಂದ ಭಕ್ತರು ವಿಚಲಿತರಾಗದೆ ನವೆಂಬರ್ 23ರಿಂದ 25ರ ವರೆಗೆ ನಡೆಯುವ ಅಷ್ಟಮಂಗಲ ಕಾರ್ಯದಲ್ಲಿ ಭಾಗಿಯಾಗಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಬೇಕಾಗಿ ಬಿಲ್ಲಾಡಿಮನೆ ಶಂಕರ ಶೆಟ್ಟಿಯವರು ಕಾವೇರಿ ಶೆಡ್ತಿ ಕವರಿನ ಪರವಾಗಿ ತಿಳಿಸಿದ್ದಾರೆ. ದೇವಿಯ ಮೂಲ ನೆಲೆಯಾದ ಸ್ಥಳ ಬಿಲ್ಲಾಡಿ ಮನೆಯೇ ಆಗಿದ್ದು, ಆ ಕಾರಣ ಅಲ್ಲಿಯೇ ಅಷ್ಟಮಂಗಲ ಪ್ರಶ್ನೆ ಇಡುವಂತೆ ತೋರಿಬಂದ ಪ್ರಕಾರ ನಡೆಸಲಾಗುವುದು. ಈ ಕುರಿತು ವಕೀಲ ಬಿ.ನಾಗರಾಜ್ ಮತ್ತು ದೇವಸ್ಥಾನದವರು ಏನಂತಾರೆ ನೋಡೋಣ.

Edited By : Shivu K
Kshetra Samachara

Kshetra Samachara

21/11/2024 05:47 pm

Cinque Terre

15.24 K

Cinque Terre

0

ಸಂಬಂಧಿತ ಸುದ್ದಿ