ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಆಕಸ್ಮಿಕ ಬೆಂಕಿ ಅವಘಡ - ರಕ್ಷಣೆಯ ಪ್ರಾತ್ಯಕ್ಷಿಕೆ

ಮುಲ್ಕಿ: ಆಕಸ್ಮಿಕ ಬೆಂಕಿ ಬಿದ್ದಾಗ ಅದನ್ನು ನಂದಿಸುವ ಪ್ರಾಥಮಿಕ ಜ್ಞಾನ ನಮ್ಮಲ್ಲಿರಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಹಮ್ಮದ್ ಕೆ ಹೇಳಿದ್ದಾರೆ.

ಶಿಮಂತೂರು ಶ್ರೀ ಶಾರದಾ ಸೆಂಟ್ರಲ್ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ, ಫೋಟೋಗ್ರಾಪರ್ಸ್ ಅಸೋಸಿಯೇಷನ್ ಮುಲ್ಕಿ ವಲಯ, ರೋಟರಿ ಕ್ಲಬ್, ಪ್ರೆಸ್ ಕ್ಲಬ್ ಮತ್ತು ಅಗ್ನಿ ಶಾಮಕ ದಳ ಮಂಗಳೂರು ವತಿಯಿಂದ ನಡೆದ ಅಗ್ನಿ ಸುರಕ್ಷತೆ ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಯಾವುದೇ ಅವಘಡ ಆದ ಸಂದರ್ಭ ಯಾವುದೇ ವ್ಯಕ್ತಿ ಗಾಯಗೊಂಡಲ್ಲಿ ಅವರಿಗೆ ಪ್ರಾರ್ಥಮಿಕ ಚಿಕಿತ್ಸೆ ಕೊಡಬೇಕು. ಈ ಬಗ್ಗೆ ನಾವು ಪ್ರಾಥಮಿಕ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು' ಎಂದರು.

ಬೇರೆ ಬೇರೆ ರೀತಿಯ ಬೆಂಕಿ ಅವಘಡ ಆದಾಗ ಅದನ್ನು ಯಾವ ರೀತಿಯಲ್ಲಿ ನಂದಿಸಲಾಗುತ್ತದೆ ಎಂಬುದನ್ನು ಶಾಲಾ ಮೈದಾನದಲ್ಲಿ ಪ್ರಾಯೋಗಿಕವಾಗಿ ತಿಳಿಸಲಾಯಿತು.

ಈ ಸಂದರ್ಭ ಅಧಿಕಾರಿಗಳಾದ ಸ್ಟಿಪನ್ ಡಿಸಿಲ್ವ, ಪ್ರಸನ್ನ, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೀತಮ್, ಮುಲ್ಕಿ ಪೊಟೋಗ್ರಾಪರ್ಸ್ ಅಸೋಸಿಯೇಶನ್ ವಲಯದ ಅಧ್ಯಕ್ಷ ಪ್ರಕಾಶ್ ಸುವರ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್, ಶಾಲಾ ಪ್ರಾಂಶುಪಾಲ ಜಿತೇಂದ್ರ ವಿ ರಾವ್ ಶಿಕ್ಷಕಿ ವನಿತಾ ಶಿಕ್ಷಕಿ ಶ್ರೀಲತಾ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಮೊಹಮದ್ ಕೆ, ಅಗ್ನಿಶಾಮಕ ದಳದ ಅಧಿಕಾರಿ

Edited By : Shivu K
PublicNext

PublicNext

23/11/2024 06:17 pm

Cinque Terre

24.26 K

Cinque Terre

0

ಸಂಬಂಧಿತ ಸುದ್ದಿ