ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕರಾಟೆ ಓವರಾಲ್ ಚಾಂಪಿಯನ್ ಶಿಪ್ ಟ್ರೋಪಿಯನ್ನು ಮುಡಿಗೇರಿಸಿಕೊಂಡ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್

ಬೈಂದೂರು: ಬುಡೋಕೋನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇವರ ವತಿಯಿಂದ ಶ್ರೀ ಕೃಷ್ಣ ಮಠ ಉಡುಪಿಯಲ್ಲಿ ನಡೆದ ಉಡುಪಿ ಮುಕ್ತ ಕರಾಟೆ ಚಾಂಪಿಯನ್ ಶಿಪ್ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ 2024 ರಲ್ಲಿ

ಕಿರಿಮಿಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಅಶ್ವಿನ್ ಪೂಜಾರಿ (6ನೇ ತರಗತಿ) ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕ , ಅನ್ವೇಷಣ್ (7ನೇ ತರಗತಿ) ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ, ಹರ್ಷಿತಾ ಎ ಖಾರ್ವಿ (3ನೇ ತರಗತಿ) ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ , ರಿಷಿಕ್ (7ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆ ವಿಭಾಗದಲ್ಲಿ ಬೆಳ್ಳಿ, ಆರ್ಯನ್ ವಿ (7ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆಯಲ್ಲಿ ಬೆಳ್ಳಿ, ರಜತ್ (7ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆ ವಿಭಾಗದಲ್ಲಿ ಬೆಳ್ಳಿ, ಎಸ್ ಎನ್ ಸುಶಾನ್( 8ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆಯಲ್ಲಿ ಕಂಚಿನ ಪದಕ, ಶ್ರೀನಿಧಿ (8ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ ,ಆರ್ಯನ್ ಎ ಪೂಜಾರಿ (8ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ , ರಿತ್ವಿಕ್ (8ನೇ ತರಗತಿ) ಕಟಾ ವಿಭಾಗದಲ್ಲಿ ಚಿನ್ನ ಮತ್ತು ಕುಮಿಟೆ ವಿಭಾಗದಲ್ಲಿ ಬೆಳ್ಳಿ, ಶುಭಾಂಗ್ (4ನೇ ತರಗತಿ)

ಕಟಾ ಮತ್ತು ಕುಮಟೆ ವಿಭಾಗದಲ್ಲಿ ಬೆಳ್ಳಿ, ಭರತ್ (7ನೇ ತರಗತಿ) ಕಟಾ ವಿಭಾಗದಲ್ಲಿ ಬೆಳ್ಳಿ, ಆರಾಧ್ಯ ಬಿ (6ನೇ ತರಗತಿ) ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ, ಶ್ರೀಶಾ (4ನೇ ತರಗತಿ) , ಗಗನ್ (6ನೇ ತರಗತಿ), ಮನೋಜ್ (7ನೇ ತರಗತಿ), ಆದಿತ್ಯ (7ನೇ ತರಗತಿ) ಶ್ರೀಶಾಂತ (7ನೇ ತರಗತಿ)ಕಟಾ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗಳಿಸಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ , ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

20/11/2024 12:18 pm

Cinque Terre

1.68 K

Cinque Terre

0

ಸಂಬಂಧಿತ ಸುದ್ದಿ