ಚಿತ್ರದುರ್ಗ: ಮಾನಸಿಕ ಖಿನ್ನತೆಯಿಂದ ತಾಯಿ - ಮಗಳು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕ ಕಂದವಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನ ಪುಷ್ಪ (55) ಹಾಗೂ ಲಾವಣ್ಯ (17) ಎಂದು ಗುರುತಿಸಲಾಗಿದೆ. ತಾಯಿ ಮಗಳು ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ಪುಷ್ಪ ಅವರ ಪತಿ ಬಸವರಾಜ್ ಅವರು ಹೃದಯಾಘದಿಂದ ಮೃತಪಟ್ಟಿದ್ದರು. ಇದರ ಖಿನ್ನತೆಯಿಂದ ಮನನೊಂದು ಮನೆಯ ಕೋಣೆ ಒಳಗಡೆ ಇಬ್ಬರು ನೇಣು ತೆಗೆದುಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಚಿಕ್ಕಜಾಜೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
PublicNext
19/11/2024 07:49 pm