ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಂಚ ಸ್ವೀಕರಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿ ಲೋಕಾ ಬಲೆಗೆ

ಚಿತ್ರದುರ್ಗ: ಪೌತಿ ಖಾತೆ ಮಾಡಿ ಕೊಡಲು ಲಂಚ ಸ್ವೀಕರಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬ ಲೋಕಾಯುಕ್ತ ಬಲೆಗೆ ಬಿದಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೆಲಗೇಲತ ಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಲೋಕಾ ಬಲೆಗೆ ಬಿದ್ದ ಅಧಿಕಾರಿ.

ಕಚೇರಿಯಲ್ಲಿ 10 ಸಾವಿರ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾನೆ. ಗ್ರಾಮದ ಚನ್ನಕೇಶವಯ್ಯ ಎಂಬುವವರಿಂದ 10 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದಿದ್ದಾನೆ. ಗ್ರಾಮ ಲೆಕ್ಕಾಧಿಕಾರಿಗೆ ಸಹಕಾರ ನೀಡಿದ್ದ ಖಾಸಗಿ ವ್ಯಕ್ತಿ ಬೋರೇಶ್ ಕೂಡಾ ಬಂಧನ ಮಾಡಲಾಗಿದೆ. ಲೋಕಾಯುಕ್ತ SP ವಾಸುದೇವ್ ರಾವ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

20/11/2024 02:52 pm

Cinque Terre

4.14 K

Cinque Terre

0