ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು - ಡಾ.ಸಂಪತ್ ಬೆಟ್ಟಗೆರೆ

ಮೂಡಿಗೆರೆ : ತೇಜಸ್ವಿಯವರು ನಡೆ ನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರಾಗಿದ್ದಾರೆ ಎಂದು ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಹೇಳಿದರು. ಕೊಟ್ಟಿಗೆಹಾರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಣಕಲ್ ಕಸಾಪ ವತಿಯಿಂದ ನಡೆದ ಕನ್ನಡ ಸಂಸ್ಕೃತಿ, ವಿಚಾರ ಗೋಷ್ಠಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

'ಅವರು ತಮ್ಮ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಕೃತಿಯಲ್ಲಿ ಪ್ರತಿಪಾದಿಸುವ ಮೂಲಕ ಅದರಂತೆ ತಮ್ಮ ಬರವಣಿಗೆಯನ್ನು ಮಾಡಿಕೊಂಡು ಬಂದವರು. ಮುಂದುವರೆದಂತೆ ಅಬಚೂರಿನ ಪೋಸ್ಟ್ ಆಫೀಸ್ ಕಥಾಸಂಕಲನದ ಮುನ್ನುಡಿ, ಮಾಯಾಲೋಕ ಕಾದಂಬರಿಯ ಪ್ರವೇಶ ನುಡಿಯಲ್ಲಿ ಹೊಸ ಚಿಂತನೆಗಳನ್ನು ಸೂಚಿಸುವ ಮೂಲಕ ತನ್ನದೇ ರಚನೆಯ ಸಾಹಿತ್ಯವನ್ನು ಆತ್ಮಾವಲೋಕನ ಮಾಡಿಕೊಳ್ಳುವ ಮುಖೇನ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಸಾಂಸ್ಕೃತಿಕ ಮುಖಾಮುಖಿಯಾಗಿ ಬರೆದವರು ತೇಜಸ್ವಿ. ಬರಹಗಾರನಾದವನು ಸಾಹಿತಿಯಾಗಬೇಕೆಂಬ ಪ್ರಚಾರದ ಹುಚ್ಚಿಗೆ ಬಿದ್ದರೆ ಅವನ ವಿಚಾರಧಾರೆ ಓದುಗನಿಗೆ ತಲುಪುವ ಬದಲಿಗೆ ಅವನು ವ್ಯಕ್ತಿ ಪೂಜನೀಯವಾಗಿ ಹೋದರೆ ತುಂಬಾ ಅಪಾಯಕಾರಿ ಎಂಬ ಅರಿವು ತೇಜಸ್ವಿ ಅವರಿಗಿತ್ತು. ಆದ್ದರಿಂದ ಅವರು ಸಾಹಿತ್ಯ ಬರವಣಿಗೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಷ್ಟು ಸಭೆ ಸಮಾರಂಭಗಳಲ್ಲಿ ಭಾಗವಹಿಸದೇ ದೂರವಾಗಿಯೆ ಉಳಿದಿದ್ದರು.

ಇಂದು ತೇಜಸ್ವಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ತುಂಬಾ ಲಘುವಾಗಿ ಚಿತ್ರಿಸುವ ಪ್ರಯತ್ನಗಳು ಆಗುತ್ತಿರುವುದು ತುಂಬಾ ವಿಷಾದಕರ. ತೇಜಸ್ವಿ ಅವರು ಜಾತ್ಯಾತೀತವಾದಿ ನಿಲುವಿನ ಚಿಂತಕ. ಅವರು ಎಂದಿಗೂ ಜಾತಿವಾದಿಯಲ್ಲ, ಪ್ರೀತಿಯ ಸಂತನಂತೆ ಬದುಕಿದವರು. ಆದರೆ ಇಂದು ಸುಳ್ಳಾದ ಪ್ರಕ್ಷಿಪ್ತಗಳನ್ನು ಸೃಷ್ಟಿಸಿದ ಬರವಣಿ ಮತ್ತು ಭಾಷಣಗಳಿಂದ ಅವರ ವಿಚಾರಗಳನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಲು ಕೆಲವು ಸ್ವಹಿತಾಸಕ್ತಿ ಚಿಂತನೆಯವರು ಮಾಡುತ್ತಿರುವುದನ್ನು ನಾವು ಖಂಡಿಸುವ ಪ್ರಯತ್ನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಭಾರತಿಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯಗೌಡ,ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯ ಅಧ್ಯಕ್ಷ ಎಂ.ಎಸ್.ನಾಗರಾಜ್,ಪೂರ್ಣೇಶ್ ಹೆಬ್ಬರಿಗೆ,ಸುಪ್ರೀತ್ ಬೆಟ್ಟಗೆರೆ ರಾಮಚಂದ್ರ,ಸಂಜಯಗೌಡ,ಪ್ರಕಾಶ್ ಬಕ್ಕಿ, ನಂದೀಶ್ ಬಂಕೇನಹಳ್ಳಿ ಮತ್ತಿತರರು ಇದ್ದರು.

Edited By : PublicNext Desk
Kshetra Samachara

Kshetra Samachara

18/11/2024 08:04 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ