ಚಿಕ್ಕಮಗಳೂರು: ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಶ್ರೀ ಕನಕದಾಸರ 537ನೇ ಜಯಂತಿಯನ್ನು ಇಂದು ರಾಜ್ಯದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಅದ್ದೂರಿಯಾಗಿ ಕನಕ ಜಯಂತಿ ಆಚರಿಸಲಾಗಿದೆ.
ನಗರದ ತಾಲೂಕು ಕಚೇರಿಯಿಂದ ಹೊರಟ ಮೆರವಣಿಗೆ ಎಂ.ಜಿ ರಸ್ತೆಯ ಮೂಲಕ ಕುವೆಂಪು ಕಲಾ ಮಂದಿರದವರೆಗೆ ಸಾಗಿತು ಮೆರವಣಿಗೆಯ ಉದ್ದಕ್ಕೂ ವಿವಿಧ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ನಂತರ ಕುವೆಂಪು ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆದವು.
Kshetra Samachara
18/11/2024 02:36 pm