ಕಾರವಾರ: ಸಂಸ್ಕೃತಿ, ಪರಂಪರೆ, ಆಚರಣೆಗಳನ್ನು ಬೆಳಕಿಗೆ ತರುವ ದೀಪಾವಳಿ ಹಬ್ಬ ಹಿಂದೂಗಳ ಪಾಲಿಗೆ ದೊಡ್ಡ ಹಬ್ಬ. ಅದರಲ್ಲಿಯೂ ರೈತರ ಒಡನಾಡಿ ಗೋವುಗಳಿಗೆ ಪೂಜೆ ಸಲ್ಲಿಸಲು ಸಿಗುವ ಹಬ್ಬವನ್ನು ರೈತರು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಅದರಂತೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಗ್ರಾಮವೊಂದರಲ್ಲಿ ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿ ಹಬ್ಬವನ್ನು ಇದೀಗ ಹುಣ್ಣಿಮೆಗೆ ಗೋವುಗಳೊಂದಿಗೆ ವಿಶಿಷ್ಟವಾಗಿ ಆಚರಿಸಿದ್ದು ಈ ಕುರಿತ ಒಂದು ಸ್ಪೇಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು . ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು, ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು. ಅರೆ ಇದೇನೂ ಹೋರಿ ಓಡಿಸೋ ಸ್ಪರ್ಧೆನಾ.. ಖಂಡಿತಾ ಅಲ್ಲ! ರೈತರ ಪಾಲಿನ ದೊಡ್ಡಹಬ್ಬ ದೀಪಾವಳಿ ಸಂಭ್ರಮ.
ಹೌದು, ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ವ್ಯಾಪ್ತಿಯ ಉಡಳ್ಳಿ-ಬೀಳೆಗೊಡ ಗ್ರಾಮಗಳ ಜನರ ದೀಪಾವಳಿ ಸಂಭ್ರಮ ಇದು. ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿಯನ್ನು ಬಿಡಬಾರದು ಎನ್ನುವ ಕಾರಣಕ್ಕೆ ಈ ಹುಣ್ಣಿಮೆ ಪಾಡ್ಯಕ್ಕೆ ರೈತರು ಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ಆಚರಿಸಿದರು.
ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲಿಸಿದ ರೈತರು, ಬಲಿಪಾಡ್ಯ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ , ಪಚ್ಚೆತೆನ್ನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವುಗಳನ್ನು ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು. ಈ ವೇಳೆ ಹೋರಿಗಳ ಓಟ ಹಾರಾಟ ನೆರೆದವರ ಆಕರ್ಷಣೆಗೆ ಕಾರಣವಾಯಿತು.
ವಿಶೇಷವಾಗಿ ಸಿದ್ದಾಪುರದ ಬಾನ್ಕುಳಿ ಮಠದಿಂದ ಹೋರಿಗಳನ್ನು ತಂದು ಅವುಗಳನ್ನು ಶೃಂಗರಿಸಿ ಮೆರವಣಿಗೆ ನಡೆಸಲಾಯಿತು. ಆದರೆ ಇದೀಗ ಯಂತ್ರೋಪಕರಣ ಬಳಕೆ ಪರಿಣಾಮ ಗೋವುಗಳನ್ನು ಸಾಕುವವರ ಪ್ರಮಾಣ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಮಠದಿಂದ ಹೋರಿಗಳನ್ನು ತಂದು ವಿಶೇಷ ಪೂಜೆ ಸಲ್ಲಿಸಿದರು. ಹೋರಿಗಳ ಶೃಂಗಾರ, ಓಟ ಎಲ್ಲವೂ ತುಂಬಾ ಚೆನ್ನಾಗಿ ಕಂಡು ಬಂತು. ನಮ್ಮ ಸಮುದಾಯದಲ್ಲಿರುವ ಈ ಸಂಪ್ರದಾಯ ಹೀಗೆ ಮುಂದುವರಿಯಬೇಕು.
ಒಟ್ಟಾರೆ ಗ್ರಾಮದಲ್ಲಿ ಬಹುತೇಕರು ಕೃಷಿಯನ್ನೇ ನಂಬಿ ಬದುಕುತ್ತಿದ್ದವರು, ಸದಾ ಗೋವುಗಳೊಂದಿಗೆ ಒಡನಾಟ ಹೊಂದಿರುವ ಕಾರಣ ನಿಂತು ಹೋಗಿದ್ದ ದೀಪಾವಳಿಯನ್ನು ಈ ಬಾರಿ ಹುಣ್ಣಿಮೆಗೆ ವಿಶೇಷವಾಗಿ ಆಚರಿಸಲಾಯಿತು.
ಸ್ಲಗ್: ಹೋರಿಗಳಿಗೆ ವಿಶೇಷ ಪೂಜೆ
ಪ್ರವೀಣ್. ಪಬ್ಲಿಕ್ ನೆಕ್ಸ್ಟ್. ಕಾರವಾರ
Kshetra Samachara
18/11/2024 12:10 pm