ಸಿದ್ದಾಪುರ : ವೈದ್ಯರ ನಿರ್ಲಕ್ಷದಿಂದ ಇತ್ತೀಚೆಗೆ ಮೃತಪಟ್ಟ ಹೊಸೂರಿನ ವಿನೋದಾ ಹಾಗೂ ಕೋಣನಗದ್ದೆಯ ಜ್ಯೋತಿ ಇವರ ಮನೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಎರಡು ಕುಟುಂಬಕ್ಕೂ ತಲಾ 50 ಸಾವಿರ ಧನಸಹಾಯ ಮಾಡುವ ಮೂಲಕ ಧೈರ್ಯ ತುಂಬಿದರು.
ಪಟ್ಟಣದ ಹೊಸೂರಿನ ವಿನೋದಾ ಇವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಅದೇ ರೀತಿ ಕೋಣನಗದ್ದೆಯ ಜ್ಯೋತಿ ಇವರ ಮನೆಗೂ ಸಹ ಭೇಟಿ ನೀಡಿ 50 ಸಾವಿರ ಧನ ಸಹಾಯ ಮಾಡಿ ನಿಮ್ಮ ಕಷ್ಟದಲ್ಲಿ ತಾವು ಸಹ ಭಾಗಿಯಾಗುವುದಾಗಿ ಧೈರ್ಯ ತುಂಬಿದರು.
ಅದೇ ರೀತಿ ಅನಾರೋಗ್ಯದಿಂದ ನಿಧನರಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕೋಲಶಿರ್ಸಿಯ ಈರೇಶ ನಾಯ್ಕ ಹಾಗೂ ಚನಮಾಂವನ ಈಶ್ವರ ನಾಯ್ಕ ಇವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು. ಜತೆಗೆ ವಿದ್ಯುತ್ ಅವಘಡದಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ಜಾನುವಾರು ಮೃತಪಟ್ಟ ಕೋಲಶಿರ್ಸಿಯ ಉಮೇಶ ನಾಯ್ಕ ಇವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗಾರಾಜ, ಡಿಸಿಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ, ಪ್ರಮುಖರಾದ ಸಿ.ಆರ್.ನಾಯ್ಕ, ಎಚ್.ಕೆ.ಶಿವಾನಂದ, ಎಸ್.ಕೆ.ನಾಯ್ಕ ಕಡಕೇರಿ, ಜನಾರ್ಧನ ನಾಯ್ಕ, ಅಣ್ಣಪ್ಪ ಶಿರಳಗಿ, ಅಶೋಕ ಹಾರ್ಸಿಕಟ್ಟಾ, ಎನ್.ಟಿ.ನಾಯ್ಕ, ಬಾಬು ನಾಯ್ಕ ಕಡಕೇರಿ, ಮಂಜುನಾಥ ತ್ಯಾರ್ಸಿ, ವಿನಾಯಕ ಕೊಂಡ್ಲಿ ಮತ್ತಿತರರು ಉಪಸ್ಥಿತರಿದ್ದರು.
PublicNext
16/11/2024 04:53 pm