'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಜಾನವಿ ಅಲಿಯಾಸ್ ಚಿನ್ನುಮರಿ ಪಾತ್ರದಲ್ಲಿ ಮಿಂಚುತ್ತಿರುವ ಚಂದನಾ ಮದುವೆ ಆಗುತ್ತಿದ್ದಾರೆ. ರೀಲ್ನಲ್ಲಿ ತುಂಬಾ ಸಲ ಮದುವೆ ಆಗಿರುವ ಚಂದನಾ ಇದೀಗ ರಿಯಲ್ ಆಗಿ ಮದುವೆ ಆಗುತ್ತಿದ್ದಾರೆ. ಚಂದನಾ ಮತ್ತು ಪ್ರತ್ಯಕ್ಷ್ ಇದೇ ನವೆಂಬರ್ 28ರಂದು ಮದುವೆ ಆಗುತ್ತಿದ್ದಾರೆ. ಭಾವಿ ಪತಿ ಪ್ರತ್ಯಕ್ಷ್ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಸಖತ್ ಹೆಸರು ಮಾಡಿದ್ದ ದಿವಂಗತ ನಟ ಉದಯ್ ಹುತ್ತಿನಗದ್ದೆ ಮತ್ತು ನಟಿ ಲಲಿತಾಂಜಲಿ ದಂಪತಿಯ ಮೊದಲ ಪುತ್ರನೇ ಪ್ರತ್ಯಕ್ಷ್. ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರು ನಟಿ ಲಲಿತಾಂಜಲಿ ಕಿನ್ನರಿ ಮತ್ತು ಒಲವಿನ ನಿಲ್ದಾಣ ಸೀರಿಯಲ್ನಲ್ಲಿ ನಟಿಸಿದ್ದಾರೆ. ಹೀಗಾಗಿ ಚಂದನಾ ಕಲಾವಿದರ ಕುಟುಂಬವನ್ನು ಸೇರಿದ್ದಾರೆ.
PublicNext
15/11/2024 05:20 pm