ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಪಟ್ಟಣ: ನಿಖಿಲ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಿ - ಯಡಿಯೂರಪ್ಪ ಗುಡುಗು

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಸಿಎಂ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ನಿಖಿಲ್ ಪರ ಬೃಹತ್ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಬಿಎಸ್‌ವೈ, ಬೊಂಬೆಗಳ ನಾಡಲ್ಲಿ ಕಾಂಗ್ರೆಸ್ ಕೈಗೊಂಬೆ ಸಿ.ಪಿ ಯೋಗೇಶ್ವರ್ ಗೆಲ್ಲುವುದರಿಂದ ಉಪಯೋಗವಿಲ್ಲ. ಒಂದು ರಸ್ತೆ ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ಅವರು ಕಿಡಿಕಾರಿದರು.

ಕರ್ನಾಟಕದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ನಾವು ತಂದ ಭಾಗ್ಯಲಕ್ಷ್ಮಿ ಯೋಜನೆ ನಿಲ್ಲಿಸಿದ್ದಾರೆ. ಅನೇಕ ಜನಪರ ಯೋಜನೆಯನ್ನು ನಿಲ್ಲಿಸಿದ್ದಾರೆ. ಅವರಿಗೆ ಹಣ ಕೊಡುವ ಯೋಗ್ಯತೆ ಇಲ್ಲ ಈ ಸರ್ಕಾರ ದಿವಾಳಿ ಆಗಿದೆ. ಮುಂದಿನ ದಿನಗಳು ಒಳ್ಳೆಯದಿದೆ. ನಿಖಿಲ್ ಅವರ ಗೆಲುವಿಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಿ. ಪ್ರಾಮಾಣಿಕ ಕೆಲಸ ಮಾಡಿದರೆ ನಿಖಿಲ್ ಅವರು 25 ಸಾವಿರ ಹೆಚ್ಚಿನ ಮತಗಳಿಂದ ನಿಖಿಲ್ ಗೆಲ್ಲುತ್ತಾರೆ ಎಂದು ಯಡಿಯೂರಪ್ಪ ಕರೆ ನೀಡಿದರು.

ಕಾಲ ಬದಲಾಗಿದೆ, ಜನ ಎಲ್ಲವನ್ನು ಯೋಚನೆ ಮಾಡುತ್ತಾರೆ. ಕೇಂದ್ರದಲ್ಲಿ ದೇವೇಗೌಡರಿಗೆ ಮತ್ತು ಮೋದಿ ಅವರಿಗೆ ಯಾವಾ ರೀತಿ ಇದೇ ಇಲ್ಲರಿಗೂ ಗೊತ್ತು. ಈ ಕ್ಷೇತ್ರವನ್ನು ಗೆಲ್ಲುವುದಾರ ಮೂಲಕ ಸಿದ್ದರಾಮಯ್ಯಗೆ ತಕ್ಕ ಪಾಠವನ್ನು ಕಲಿಸಬೇಕು. ನಾಳೆ ಒಂದು ದಿನ ಮನೆ ಮನೆಗೆ ಹೋಗಿ ನಿಖಿಲ್ ಪರ ಮತಯಾಚನೆ ಮಾಡಿ. ನಿಮ್ಮ ಸೇವೆ ಮಾಡುವುದಕ್ಕೆ ನಿಖಿಲ್ ಕುಮಾರಸ್ವಾಮಿಗೆ ಅವಕಾಶ ಮಾಡಿಕೊಡಿ ಎಂದು ಜನತೆಯಲ್ಲಿ ಮತಯಾಚಿಸಿದ ಬಿಎಸ್‌ವೈ.

Edited By : Suman K
PublicNext

PublicNext

11/11/2024 06:16 pm

Cinque Terre

20.67 K

Cinque Terre

0