ವಿಜಯಪುರ : ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಹಟ್ಟಿಹಳ್ಳ ಪಕ್ಕದಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ನಾಲತವಾಡ ಪಟ್ಟಣದ ಹಟ್ಟಿಹಳ್ಳ ಪಕ್ಕದಲ್ಲಿ ವ್ಯಕ್ತಿಯೊರ್ವ ಬಹಿರ್ದೆಸೆಗೆ ಹೋದಾಗ ಆತನ ಹಿಂದೆ ಅಡಗಿ ಕುಳಿತ ಮೊಸಳೆ ಸೌಂಡ ಮಾಡಿದೆ ಎನ್ನಲಾಗಿದೆ.
ಮೊಸಳೆ ಸೌಂಡಿಗೆ ಹೆದರಿದ ವ್ಯಕ್ತಿ ಮೊಸಳೆಯಿಂದ ಜಸ್ಟ ಪಾರಾಗಿದ್ದಾನೆ, ಬಳಿಕ ಗ್ರಾಮಸ್ಥರಿಗೆ ವಿಷಯ ತಲುಪಿಸಿದ್ದಾನೆ ವಿಷಯ ತಿಳಿದ ಗ್ರಾಮಸ್ಥರು ಮೊಸಳೆ ನೋಡಲು ಮುಗಿಬಿದ್ದಿದ್ದಾರೆ. ಮೊಸಳೆ ಕಂಡು ಭಯಭೀತರಾದ ಗ್ರಾಮಸ್ಥರು ಮೊಸಳೆ ಸೆರೆಗೆ ಆಗ್ರಹಿಸಿದ್ದಾರೆ.
PublicNext
29/10/2024 01:34 pm